ತಂಗಿಯ ಮಗನಿಗೆ ಮೈಸೂರು ಡೈರಿ ನಿರ್ದೇಶಕರನ್ನಾಗಿ ಮಾಡಿದ್ರ ಯಡಿಯೂರಪ್ಪ !?

admin
By admin
0 Min Read

ಯಡಿಯೂರಪ್ಪ ಅವರ ತಂಗಿಯ ಮಗ ಆಗಿರುವ  ಅಶೋಕ್, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಹೋದರಿಯ ಪುತ್ರನಿಗೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದಕ್ಕೆ ಜೆಡಿಎಸ್ ಕಿಡಿಕಾರಿದೆ. ಉತ್ತರ ಕರ್ನಾಟಕದ ಜನ ನೆರೆಹಾವಳಿಯಿಂದ ತತ್ತರಿಸುತ್ತಿದ್ದರೆ, ಸಿಎಂ ತಮ್ಮ ಸಂಬಂಧಿಕರಿಗೆ ಅಧಿಕಾರ ಹಂಚುವುದರಲ್ಲಿ ನಿರತರಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಟೀಕಿಸಲಾಗಿದೆ.

Share This Article