ಧಾರವಾಡ : ಇಲ್ಲೊಬ್ಬ ಮಗ ತನ್ನ ತಂದೆಯನ್ನು ಕೊಲೆ ಮಾಡಿ ಅದನ್ನು ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ,
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರಿನಲ್ಲಿ ಭೂಪನೊಬ್ಬ ತನ್ನ ತಂದೆಯನ್ನು ಕೊಲೆಗೈದು ಅವರು ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಿ ಮಗ ಪೊಲೀಸರ ಅತಿಥಿಯಾಗಿದ್ದಾನೆ.
ಹನುಮಂತಪ್ಪ ಕಿರೇಸೂರ ಮಗನಿಂದ ಹತನಾದ ದುರ್ದೈವಿ. ರಮೇಶ್ ಕಿರೇಸೂರ ತಂದೆಯನ್ನು ಕೊಂದ ಪಾಪಿ. ಅಕ್ಟೋಬರ್ 27ರಂದು ಜಾವೂರು – ಹಂಚಿನಾಳ ರಸ್ತೆ ಮಧ್ಯೆ ಹನುಮಂತಪ್ಪ ಶವ ಪತ್ತೆಯಾಗಿತ್ತು. ತಂದೆಗೆ ಅಪಘಾತವಾಗಿದೆ ಎಂದು ರಮೇಶ್ ನವಲಗುಂದ ಠಾಣೆಗೆ ದೂರು ನೀಡಿದ್ದ. ಶವದ ಸ್ವರೂಪ ನೋಡಿ ಅಪಘಾತವಲ್ಲ ಎಂಬ ನಿರ್ಧರಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಪಾಪಿ ಮಗನೇ ಕೊಲೆಗೈದು ಅಪಘಾತ ಎಂದು ಬಿಂಬಿಸಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ತಂದೆ ಹನುಮಂತಪ್ಪ ನಿತ್ಯ ಕುಟುಂಬದವರಿಗೆ ಕಿರಿಕಿರಿ ಮಾಡುತ್ತಿದ್ದನೆಂದು ರಮೇಶ್ ತನ್ನ ಸೋದರ ಸಂಬಂಧಿಗಳಾದ ವೆಂಕಪ್ಪ ಮತ್ತು ಸತ್ಯಪ್ಪ ಜೊತೆ ಸೇರಿ ಹತ್ಯೆಗೈದಿದ್ದಾನೆ! ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆಯನ್ನು ಕೊಂದು ಅಪಘಾತವೆಂದು ಬಿಂಬಿಸಿದ್ದ ಮಗ ಅಂದರ್!
Date: