ಬೆಂಗಳೂರು: ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ 24 ಗಂಟೆಯಲ್ಲಿ ಅಥವಾ 48 ಗಂಟೆಯಲ್ಲಿ ವಿದೇಶದಿಂದ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿ ಮನವಿ ಮಾಡಿದರು. ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು,
ಪ್ರಜ್ವಲ್ ಎಲ್ಲಿದ್ದರೂ ಎಸ್ ಐ ಟಿ ಮುಂದೆ ಹಾಜರಾಗಲು ಮನವಿಯನ್ನು ಮಾಡುವಂತೆ ಎಚ್ ಡಿ ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ. ಏಕೆ ಹೆದರಬೇಕು? ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು. ಎಷ್ಟು ದಿನ ಕಳ್ಳಾ ಪೊಲೀಸ್ ಆಟ? ದೇವೇಗೌಡರ ರಾಜಕೀಯ ಬದುಕನ್ನು ಪ್ರಜ್ವಲ್ ಬೆಳೆಯಲು ಎಲ್ಲಿದ್ದರೂ 48 ಗಂಟೆಯಲ್ಲಿ ವಾಪಸ್ ಬರಲು ಮನವಿ ಮಾಡುತ್ತೇನೆ ಎಂದರು.
ತನಿಖೆಗೆ ಹಾಜರಾಗಲು ಪ್ರಜ್ವಲ್ ಗೆ ಕುಮಾರಸ್ವಾಮಿ ಮನವಿ
Date: