ತನ್ನದೇ ದಾಖಲೆ ಮುರಿಯಲು ಮತ್ತೆ ಬರುತ್ತಿದ್ದಾರೆ ಪುನೀತ್

Date:

ಪುನೀತ ರಾಜಕುಮಾರ್.. ಬಾಕ್ಸ್ ಆಫೀಸ್ ಆಗಲಿ ಅಥವಾ ಕಿರುತೆರೆ ಆಗಲಿ ಎರಡರಲ್ಲಿಯೂ ಸಹ ಜಾದೂ ಮಾಡುವಂತಹ ನಟ. ಸಾಲು ಸಾಲು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ಯಾವುದೇ ನಟನೂ ಕೂಡ ಹೊಂದಿಲ್ಲ ದಂತಹ ಅತಿಹೆಚ್ಚು ಸಕ್ಸಸ್ ರೇಟ್ ಹೊಂದಿರುವಂತಹ ನಟ ಪುನೀತ್.

ಹೌದು, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಮ್ಮ ಕನ್ನಡ ನಟ ಪುನೀತ್ ರಾಜ್ ಕುಮಾರ್ ಹೊಂದಿರುವಷ್ಟು ಗೆಲುವಿನ ಶೇಕಡಾಂಶ ವನ್ನು ಬೇರೆ ಯಾವುದೇ ನಟ ಕೂಡಾ ಹೊಂದಿಲ್ಲ. ಹೀಗೆ ಹಿರಿತೆರೆ ಮೇಲೆ ತನ್ನ ಚಿತ್ರಗಳ ಮೂಲಕ ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿರುವ ಪುನೀತ್ ರಾಜ್ ಕುಮಾರ್ ಕಿರುತೆರೆಯಲ್ಲಿಯೂ ಕೂಡ ದಾಖಲೆಗಳ ಒಡೆಯ.ಸಾಲು ಸಾಲು ಚಿತ್ರಗಳನ್ನು ನೀಡಿ ಹಿರಿತೆರೆ ಮೇಲೆ ಅಬ್ಬರಿಸಿರುವ ಪುನೀತ್ ರಾಜ್ ಕುಮಾರ್ ಕಿರುತೆರೆಯಲ್ಲಿ ಕನ್ನಡದ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ರೀತಿಯ ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಖಾಸಗಿ ವಾಹಿನಿಗಳ ಟೆಲಿವಿಜನ್ ರೇಟಿಂಗ್ ಪಾಯಿಂಟ್‌ಗಳನ್ನು ಮೇಲೆತ್ತಿದ ಉದಾಹರಣೆ ಎಲ್ಲರ ಕಣ್ಮುಂದೆಯೂ ಇದೆ.

ಅಷ್ಟೇ ಅಲ್ಲದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡುಗ ಚಿತ್ರ ಇಲ್ಲಿಯವರೆಗೂ ಸಹ ಅತಿ ಹೆಚ್ಚು ಟೆಲಿವಿಜನ್ ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಚಿತ್ರವಾಗಿದೆ. ಪುನೀತ್ ರಾಜ್ ಕುಮಾರ್ ಅವರ ದೊಡ್ಮನೆ ಹುಡ್ಗ ಅತಿಹೆಚ್ಚು ಟೆಲಿವಿಜನ್ ರೇಟಿಂಗ್ ಪಾಯಿಂಟ್ಸ್ ಹೊಂದಿದ್ದರೆ ದರ್ಶನ್ ಅವರ ಕುರುಕ್ಷೇತ್ರ ಚಿತ್ರ ಅತಿ ಹೆಚ್ಚು ಟೆಲಿವಿಷನ್ ರೇಟಿಂಗ್ಸ್ ಹೊಂದಿದೆ. ಇನ್ನು ಪುನೀತ್ ಅಭಿನಯದ ರಾಜಕುಮಾರ, ಅಂಜನೀಪುತ್ರ, ನಟ ಸಾರ್ವಭೌಮ ಚಿತ್ರಗಳು ಕೂಡ ದೊಡ್ಡ ಮಟ್ಟದ ಟೆಲಿವಿಜನ್ ರೇಟಿಂಗ್ ಪಾಯಿಂಟ್ಸ್ ಹೊಂದಿವೆ. ಈ ಮೂಲಕ ಪುನೀತ್ ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಮಟ್ಟದ ದಾಖಲೆಯ ಟೆಲಿವಿಜನ್ ರೇಟಿಂಗ್ ಪಾಯಿಂಟ್ಸ್ ಹೊಂದಿರುವ ನಟ ಎನಿಸಿಕೊಂಡಿದ್ದಾರೆ.

ಇದೀಗ ಪುನೀತ್ ಮತ್ತೊಮ್ಮೆ ಟಿಆರ್ ಪಿ ದಾಖಲೆ ಸೃಷ್ಟಿಸಲು ಮರಳಿ ಬರುತ್ತಿದ್ದಾರೆ. ಹೌದು, ಪುನೀತ್ ರಾಜ್ ಕುಮಾರ್ ಅಭಿನಯದ ಸೂಪರ್ ಬ್ಲಾಕ್ ಬಸ್ಟರ್ ಯುವರತ್ನ ಚಿತ್ರದ ಖಾಸಗಿ ವಾಹಿನಿಯಾದ ಉದಯ ಟೀವಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ಸಂಜೆ 6.30ಕ್ಕೆ ಪ್ರಸಾರವಾಗಲಿದ್ದು ತಮ್ಮದೇ ಆದ ದೊಡ್ಮನೆ ಹುಡ್ಗ ಚಿತ್ರದ ಟೆಲಿವಿಷನ್ ರೇಟಿಂಗ್ ಅನ್ನು ಯುವರತ್ನ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಮುರಿದು ಹಾಕಲಿದ್ದಾರೆ. ಸದ್ಯ ಪುನೀತ್ ಅಗಲಿಕೆಯ ನೋವಿನಲ್ಲಿರುವ ಕರ್ನಾಟಕ ಜನತೆ ಪ್ರತಿನಿತ್ಯ ಪುನೀತ್ ರಾಜ್ ಕುಮಾರ್ ಅವರ ಕುರಿತಾದ ಸುದ್ದಿಗಳು, ವಿಷಯಗಳನ್ನು ಓದುತ್ತಿದ್ದು ಸಾಮಾಜಿಕ ಜಾಲತಾಣದ ತುಂಬಾ ಎಲ್ಲಿ ನೋಡಿದರೂ ಕೇವಲ ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳು ಹಾಗೂ ವಿಡಿಯೊಗಳೇ ಕಂಡುಬರುತ್ತಿದೆ.

ಹೀಗಿರುವಾಗ ಇಂತಹ ಸಮಯದಲ್ಲಿ ಯುವರತ್ನ ಚಿತ್ರ ಕಿರು ತೆರೆ ಮೇಲೆ ಬಂದರೆ ಅದನ್ನು ಎಷ್ಟು ಜನ ವೀಕ್ಷಿಸಲಿದ್ದಾರೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ. ಸಾಮಾನ್ಯವಾಗಿ ಪುನೀತ್ ಚಿತ್ರ ಕಿರುತೆರೆಯಲ್ಲಿ ಬಂದರೆ ದೊಡ್ಡ ಮಟ್ಟದ ಟಿಆರ್ಪಿ ಕಲೆ ಹಾಕಿ ಬಿಡುತ್ತದೆ. ಇನ್ನು ನಿಧನದ ನಂತರ ಕಿರುತೆರೆಗೆ ಬರುತ್ತಿರುವ ಪುನೀತ್ ಅವರ ಯುವರತ್ನ ನಿರೀಕ್ಷೆಗೂ ಮೀರಿ ಟೆಲಿವಿಜನ್ ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...