ನಾಯಿ.. ಬಲು ನಿಯತ್ತಿನ ಪ್ರಾಣಿ. ನಾಯಿಗಿರುವ ನಿಯತ್ತು ಮನುಷ್ಯನಿಗೆ ಇಲ್ಲ ಎಂಬ ಮಾತನ್ನು ಹಲವಾರು ಮಂದಿ ಹೇಳುತ್ತಿರುತ್ತಾರೆ. ಅನ್ನ ಹಾಕಿದ ಋಣವನ್ನು ತೀರಿಸಲು ನಾಯಿ ನಮಗೆ ತುಂಬಾ ನಿಯತ್ತಿನಿಂದ ಇರುತ್ತದೆ. ಹೀಗೆ ತನಗೆ ನಿಯತ್ತನ್ನು ತೋರಿಸಿದ ನಾಯಿಗೆ ವ್ಯಕ್ತಿಯೋರ್ವ ಆಸ್ತಿಯನ್ನ ಬರೆದಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಹೌದು 51 ವರ್ಷದ ನಾರಾಯಣ ಎಂಬ ವ್ಯಕ್ತಿಯು ತನ್ನ ಬಳಿ ಇದ್ದ ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ತನ್ನ ನಾಯಿಯ ಹೆಸರಿಗೆ ಬರೆದಿದ್ದಾನೆ. ಮಕ್ಕಳಿದ್ದರೂ ಸಹ ಮಕ್ಕಳ ಹೆಸರಿಗೆ ಆಸ್ತಿಯನ್ನ ಬರೆಯದಿರಲು ಕಾರಣ ವಯಸ್ಸಾದ ಮೇಲೆ ಮಕ್ಕಳು ಆತನನ್ನ ಚೆನ್ನಾಗಿ ನೋಡಿಕೊಳ್ಳದೆ ಇರುವುದು. ಹೌದು ಮಕ್ಕಳು ಸರಿಯಾಗಿ ನೋಡುತ್ತಿಲ್ಲ, ಗಮನಿಸುತ್ತಿಲ್ಲ ಕೀಳಾಗಿ ಕಾಣುತ್ತಿದ್ದಾರೆ, ಚಿಕ್ಕವರಿದ್ದಾಗ ಸಾಕಿ ಬೆಳೆಸಿದ ಮಕ್ಕಳು ದೊಡ್ಡವರಾದಮೇಲೆ ಕಿಂಚಿತ್ತು ಸಹಾಯ ಮಾಡುತ್ತಿಲ್ಲ ಎಂಬ ಕಾರಣದಿಂದ ಬೇಸತ್ತು ತನ್ನ ಆಸ್ತಿಯನ್ನು ನನ್ನ ಜೊತೆ ನಿಯತ್ತಾಗಿ ಇದ್ದ ನಾಯಿಯ ಹೆಸರಿಗೆ ಬರೆದಿದ್ದಾನೆ.
ಇನ್ನು ಉಳಿದ ಎರಡು ಎಕರೆಯಿಂದ ತನ್ನ ಪತ್ನಿಯ ಹೆಸರಿಗೆ ನಾರಾಯಣ ಅವರು ಬರೆದಿದ್ದಾರೆ. ಜೀವನದಲ್ಲಿ ತನ್ನ ಕಷ್ಟದ ದಿನಗಳಲ್ಲಿ ಹೆಂಡತಿ ಮತ್ತು ನಾಯಿ ಇಬ್ಬರೇ ಇದ್ದರು ಎಂಬ ಕಾರಣಕ್ಕೆ ನಾರಾಯಣ್ ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಮನುಷ್ಯನ ಮತ್ತು ಮೂಕಪ್ರಾಣಿಯ ನಡುವಿನ ಅನುಬಂಧ ಎಂಥದ್ದು ಎಂಬುದು ಸಾಬೀತಾಗಿದೆ..