ನಟ ಸೋನುಸೂದ್ ಬಡವರ ಕಷ್ಟಕ್ಕೆ ಸದಾ ಮಿಡಿಯುವ ಹೃದಯವಂತ ನಟ. ಕಳೆದ ವರ್ಷ ಕೊರೊನಾ ಆರಂಭದಿಂದಲೂ ಒಂದಲ್ಲೊಂದು ರೀತಿಯಲ್ಲಿ ಬಡವರು, ನಿರ್ಗತಿಕರು, ವಲಸಿಗರಿಗೆ ಸಹಾಯ ಮಾಡುತ್ತಿರುವ ನಟ ಸೋನು ಸೂದ್ ಅವರನ್ನು ಜನರು ದೇವರಂತೆ ಸೋನು ಸೂದ್ ಅವರನ್ನು ನೋಡುತ್ತಿದ್ದಾರೆ. ಸೋನು ಸೂದ್ ಎಲ್ಲರ ಮನವನ್ನು ಗೆದ್ದಿದ್ದಾರೆ.

ಜಾತಿ, ಧರ್ಮ, ಭಾಷೆ ,ರಾಜ್ಯ ಎಲ್ಲವನ್ನೂ ಮೀರಿ ದೇಶದೆಲ್ಲೆಡೆ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಸಾಕಷ್ಟು ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೋನು ಸೂದ್ ನಡೆ ಎಲ್ಲರಿಗೂ ಇಷ್ಟವಾಗಿದೆ. ಇಂಥಾ ಸೋನು ಸೂದ್ ಹೆಸರಲ್ಲಿ ಅಭಿಮಾನದಿಂದ ಒಬ್ಬ ವ್ಯಕ್ತಿ ಮಟನ್ ಸ್ಟಾಲ್ ಕೂಡ ಇಟ್ಟಿದ್ದಾನೆ! ಅಂದು ಕಂಡ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಹೌದು ವಿವಿಧ ರೀತಿಯಲ್ಲಿ ಅಭಿಮಾನಿಗಳು ರಿಯಲ್ ಹೀರೋ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಟನ್ ಅಂಗಡಿಗೆ ಸೋನು ಸೂದ್ ಹೆಸರಿಟ್ಟಿದ್ದಾರೆ.
ತೆಲಂಗಾಣದ ಕರೀಂನಗರದಲ್ಲಿ ಕನ್ನಯ್ಯ ಎಂಬ ವ್ಯಕ್ತಿ ತನ್ನ ಮಟನ್ ಶಾಪ್ಗೆ ಸೋನು ಸೂದ್ ಇಟ್ಟು ಕೆಜಿಗೆ 700 ರೂ. ಕುರಿ ಮಾಂಸವನ್ನು 600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಉಳಿದ ನೂರು ರೂಪಾಯಿಯಲ್ಲಿ 50 ರೂ. ಗ್ರಾಹಕರ ಉಳಿತಾಯವಾಗುತ್ತಿದ್ದು, 50 ರೂಪಾಯಿಯನ್ನು ಸೋನು ಸೂದ್ ಟ್ರಸ್ಟ್ಗೆ ನೀಡುವುದಾಗಿ ಈತ ತಿಳಿಸಿದ್ದಾನೆ.

ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಸೋನು, “ನಾನೊಬ್ಬ ಸಸ್ಯಾಹಾರಿ. ನನ್ನ ಹೆಸರಲ್ಲೇ ಮಟನ್ ಅಂಗಡಿಯೇ? ನಾನು ಈತನಿಗೆ ಸಸ್ಯಾಹಾರಿ ಸಂಬಂಧ ಅಂಗಡಿ ತೆರೆಯಲು ಸಹಾಯ ಮಾಡಲೇ” ಎಂದು ಕೇಳಿದ್ದಾರೆ.
ಈ ಹಿಂದೆ ಪೇಟಾ ಸಂಸ್ಥೆ (PETA -ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್)ಯು 2020ರ ‘ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರೆಟಿ’ಯಾಗಿ ಸೋನು ಸೂದ್ರನ್ನು ಆಯ್ಕೆ ಮಾಡಿತ್ತು.







