ತಮಿಳಿಗನನ್ನು ಮದುವೆಯಾಗ್ತೀನಿ ಎಂದ ರಶ್ಮಿಕಾ!

Date:

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುವುದರ ಮೂಲಕ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್ ನಲ್ಲಿ ಇರುತ್ತಾಳೆ. ಕನ್ನಡ ಬಿಟ್ಟು ತೆಲುಗು ಚಿತ್ರರಂಗಕ್ಕೆ ಹೋದಾಗ ನನಗೆ ತೆಲುಗು ಎಂದರೆ ತುಂಬಾ ಇಷ್ಟ ಎಂದು ಹೇಳಿಕೆ ನೀಡಿದ್ದ ಈಕೆ ತಮಿಳು ಚಿತ್ರರಂಗಕ್ಕೆ ಹೋದಾಗ ಕನ್ನಡ ತೆಲುಗು ಅಷ್ಟಾಗಿ ಬರೋದಿಲ್ಲ ತಮಿಳು ಸ್ವಲ್ಪ ಬರುತ್ತೆ ಅಂತ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಳು.

 

 

ತಾನು ಯಾವ ಚಿತ್ರರಂಗಕ್ಕೆ ಹೋಗುತ್ತಾಳೋ ಆ ಚಿತ್ರರಂಗದ ಪರ ರಶ್ಮಿಕಾ ಮಂದಣ್ಣ ಹೊಗಳಿ ಮಾತನಾಡುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅಲ್ಲಿನ ಜನ ತನ್ನನ್ನು ಮೆಚ್ಚಿಕೊಳ್ಳಲಿ ಅಂತಲೋ, ಅಲ್ಲಿನ ಜನ ತನ್ನ ಸಿನಿಮಾವನ್ನು ನೋಡಲಿ ಅಂತಲೋ ರಶ್ಮಿಕಾ ಮಂದಣ್ಣ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರಬಹುದು. ಏನೇ ಆಗಲಿ ಸಮಯ ಸಾಧನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿದ್ಯೆ ಅಲ್ಲ ಬಿಡಿ..

 

 

ಇನ್ನು ಇತ್ತೀಚೆಗಷ್ಟೇ ತಮಿಳು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಇಂಥದ್ದೇ ಹೇಳಿಕೆಯನ್ನು ನೀಡಿ ಸುದ್ದಿಯಾಗಿದ್ದಾಳೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಅಭಿನಯದ ತಮಿಳು ಚಿತ್ರ ಸುಲ್ತಾನ್ ಬಿಡುಗಡೆಯಾಗಿತ್ತು. ಈ ಚಿತ್ರದ ಕುರಿತು ಮಾತನಾಡಿದ ರಶ್ಮಿಕಾ ಸುಲ್ತಾನ್ ಚಿತ್ರದಲ್ಲಿ ತಮಿಳು ನಾಡಿನ ಸಂಸ್ಕೃತಿ ನನಗೆ ತುಂಬಾ ಇಷ್ಟವಾಯಿತು, ತಮಿಳು ಸಂಸ್ಕೃತಿಯಲ್ಲಿ ಬದುಕುವ ಆಸೆಯಾಗುತ್ತಿದ್ದು ತಮಿಳು ಹುಡುಗನನ್ನು ಮದುವೆಯಾಗುತ್ತೇನೆಂದು ರಶ್ಮಿಕಾ ಹೇಳಿಕೆ ನೀಡಿದ್ದಾಳೆ.

 

 

ಇನ್ನು ರಶ್ಮಿಕಾ ನೀಡಿರುವ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತಮಿಳು ಚಿತ್ರರಂಗಕ್ಕೆ ಹೊಸದಾಗಿ ಹೋಗಿರುವ ಈಕೆ ಅಲ್ಲಿಯ ಜನರನ್ನು ತನ್ನತ್ತ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡಿ ಗಿಮಿಕ್ ಮಾಡುತ್ತಿದ್ದಾಳೆ ಅಷ್ಟೆ, ಇವಳ ಈ ರೀತಿಯ ಗಿಮಿಕ್ ಗಳನ್ನು ತೆಲುಗು ಚಿತ್ರರಂಗಕ್ಕೆ ಹೋದಾಗಲೇ ಎಲ್ಲರೂ ನೋಡಿದ್ದಾರೆ ಬಿಡಿ ಎಂದು ನೆಟ್ಟಿಗರು ರಶ್ಮಿಕಾ ಕಾಲೆಳೆದಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...