ತಮಿಳು ನಟ ಸೂರ್ಯ ಶೂಟಿಂಗ್ ವೇಳೆ ತಲೆಗೆ ಗಾಯ ಮಾಡಿಕೊಂಡಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಲೆಗೆ ಸಣ್ಣ ಗಾಯವಾಗಿದ್ದು, ಈ ಘಟನೆಯ ನಂತರ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
44 ಎಂದು ಹೆಸರಿಸಲಾದ ಸಿನಿಮಾ ಶೂಟಿಂಗ್ ವೇಳೆ ನಟನ ತಲೆಗೆ ಗಾಯವಾಗಿದೆ. ಈ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶಿಸುತ್ತಿದ್ದು, ರಾಜಶೇಖರ್ ಪಾಂಡಿಯನ್ ನಿರ್ಮಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ನಟನ ಕುರಿತು ಧೈರ್ಯ ತುಂಬಿದ್ದಾರೆ.
ಮಾಹಿತಿ ಪ್ರಕಾರ, ಸೂರ್ಯ ಅವರ ತಲೆಗೆ ಸಣ್ಣ ಗಾಯವಾಗಿದೆ. ಊಟಿಯ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಚೇತರಿಸಿಕೊಳ್ಳಲು ಕೊಂಚ ಬಿಡುವುತೆಗೆದುಕೊಳ್ಳಲು ಹೇಳಿದ್ದಾರೆ. ಅದರಂತೆಯೇ ಚಿತ್ರತಂಡ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ತಮಿಳು ನಟ ಸೂರ್ಯ ಶೂಟಿಂಗ್ ವೇಳೆ ತಲೆಗೆ ಗಾಯ!
Date: