ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಾರಿಗೆ ಸಚಿವೆ ಚಂದ್ರ ಪ್ರಿಯಾಂಕಾ

0
21649

ಪುದುಚೇರಿ ಸಾರಿಗೆ ಸಚಿವೆ ಚಂದ್ರ ಪ್ರಿಯಾಂಕಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಲಿತ ಸಮುದಾಯದ ಮಹಿಳಾ ನಾಯಕಿಯಾಗಿ ಅನುಭವಿಸಿದ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಚಂದ್ರ ಪ್ರಿಯಾಂಕಾ ( ಅವರು ಅಖಿಲ ಭಾರತ NR ಕಾಂಗ್ರೆಸ್ನಿಂದ ಸಚಿವರಾಗಿದ್ದರು. ಅವರು ಕೇಂದ್ರಾಡಳಿತ ಪ್ರದೇಶದ 41 ವರ್ಷಗಳ ಇತಿಹಾಸದಲ್ಲಿ ಎರಡನೇ ಮಹಿಳಾ ಸಚಿವರಾಗಿದ್ದರು. ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಿ ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.