‘ರಾಜಕೀಯ ಹುಲಿ’, ‘ರಾಜ್ಯದ ಹುಲಿ’, ‘ಮೈಸೂರು ಹುಲಿ’ ಹೀಗೆ ಘೋಷಣೆಗಳ ಜೊತೆ ಅಭಿಮಾನಿಗಳು, ಕಾರ್ಯಕರ್ತರು ಸಿದ್ದರಾಮಯ್ಯರನ್ನು ತವರು ಜಿಲ್ಲೆ ಮೈಸೂರಿನಲ್ಲಿ ಸ್ವಾಗತಿಸಿದರು. ಆದರೆ ಮುಂದಿನ ಸಿಎಂ ಎಂಬ ಘೋಷಣೆ ಕೇಳಲಿಲ್ಲ.
ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದಾರೆ. ಎರಡು ತಿಂಗಳ ಬಳಿಕ ನಗರಕ್ಕೆ ಬಂದ ಸಿದ್ದರಾಮಯ್ಯರನ್ನು ಕೊಲಂಬಿಯಾ ಸರ್ಕಲ್ ಬಳಿ ಕಾರ್ಯರ್ತರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹಲವಾರು ಘೋಷಣೆಗಳು ಕೇಳಿ ಬಂದವು. ಆದರೆ ಮುಂದಿನ ಸಿಎಂ ಎಂಬ ಘೋಷಣೆ ಕೇಳಿಬರಲಿಲ್ಲ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ನಡೆದಿದೆ.