ತಹಶೀಲ್ದಾರ್ ಜೀಪ್ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಯುವಕ
ಚಿತ್ರದುರ್ಗ:- ಚಳ್ಳಕೆರೆ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ತಾಲೂಕು ಕಚೇರಿ ಬಳಿ ಯುವಕನೊಬ್ಬ ಪೆಟ್ರೋಲ್ ಸುರಿದು ತಹಶೀಲ್ದಾರ್ ಜೀಪ್ಗೆ ಬೆಂಕಿಯಿಟ್ಟ ಘಟನೆ ಜರುಗಿದೆ. ಜೀಪ್ ಮೇಲೆ ಏರಿ ಬೆಂಕಿಯಿಟ್ಟು ಪೃಥ್ವಿ ಎಂಬ ಯುವಕ ಫೋಸ್ ಕೊಟ್ಟಿದ್ದಾನೆ. ಕೂಡಲೇ ಸ್ಥಳೀಯರು ಆತನ ಕೈಯಲ್ಲಿದ್ದ ಪೆಟ್ರೋಲ್ನ್ನು ಕಸಿದುಕೊಂಡಿದ್ದಾರೆ.
ಇನ್ನುಆರೋಪಿ ಪೃಥ್ವಿರಾಜ್ ಹುಚ್ಚಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಘಟನೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಧ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬೆಂಕಿ ಇಡಲು ಕಾರನವೇನು ಎಂದು ತನಿಖೆ ಮುಂದುವರಿಸಿದ್ದಾರೆ.