ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿಯ 25 ಸಂಸದರಿಗರ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್ವೈ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.
ರಾಜ್ಯಕ್ಕೆ ಏಳು ಮೀಸಲು ಕ್ಷೇತ್ರವನ್ನು ಗೆದ್ದರೂ ಒಬ್ಬರನ್ನು ಮಂತ್ರಿ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರಿಬ್ಬರು ಹೇಳಿದ್ದಾರೆ, ಕೇಂದ್ರದಲ್ಲಿ ದಲಿತ ಮುಖಂಡರನ್ನು ಮಂತ್ರಿ ಮಾಡುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ. ನಿಮಗೆ ತಾಕತ್ತಿದ್ದರೆ ದಲಿತ ಸಿಎಂ ಮಾಡಿ ತೋರಿಸಿ ಎಂದು ಬಿಎಸ್ ಯಡಿಯೂರಪ್ಪ ಸವಾಲೆಸೆದರು.