ತಾನು ಇನ್ನೊಬ್ಬಳನ್ನು ಮದುವೆಯಾಗಲು ಹೆಂಡತಿ ಡಿಟೇಲ್ಸ್ ಹಾಕಿದವನ ಕಥೆ ಅಯ್ಯೋ ಪಾಪ

Date:

ತಾನು ಬೇರೆ ಮದುವೆಯಾಗುವ ಉದ್ದೇಶದಿಂದ ಹೆಂಡತಿಯ ಸಂಪೂರ್ಣ ಮಾಹಿತಿ ಆನ್​ಲೈನ್ ಮ್ಯಾಟ್ರಿಮೊನಿಯಲ್​​ ಸೈಟ್​​ನಲ್ಲಿ ಹಾಕಿ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬ ಸಿಕ್ಕಿಬಿದ್ದಿದ್ದಾನೆ.

‘ನನಗೆ ಸೂಕ್ತ ವರ ಬೇಕಾಗಿದ್ದಾನೆ’ ಎಂದು ಪತ್ನಿಯೇ ಹೇಳುವಂತೆ ಮ್ಯಾಟ್ರಿಮೊನಿಯಲ್​​ ಸೈಟ್​​ನಲ್ಲಿ ಹೆಂಡತಿ ಪ್ರೊಫೈಲ್​​ ಕ್ರಿಯೆಟ್​ ಮಾಡಿದ್ದಾನೆ ಈ ಭೂಪ.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಎಸ್​​. ಓಂ ಕುಮಾರ್​ ಎಂಬಾತ ಸದ್ಯ ಪೊಲೀಸರ ಅತಿಥಿ.

ವೆಳ್ಳಿಯೂರು ಗ್ರಾಮದವರಾದ ಈತನ ಮದುವೆ ಕೆಲ ವರ್ಷಗಳ ಹಿಂದೆ ನಡೆದಿದೆ. ಮದುವೆಯ ನಂತರ ದಂಪತಿ ವಿದೇಶದಲ್ಲಿ ನೆಲೆಸಿದ್ದಾರೆ. ಆದರೆ ಅಲ್ಲಿಯೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ನಂತರ ವಾಪಸ್‌ ಚೆನ್ನೈಗೆ ಬಂದಿದ್ದಾರೆ. ಸಂಸಾರದಲ್ಲಿ ಬಿರುಕು ದೊಡ್ಡದಾಗುತ್ತಾ ಸಾಗುತ್ತಿದ್ದಂತೆಯೇ ಪತ್ನಿಯಿಂದ ವಿಚ್ಛೇದನ ಬಯಸಿದ್ದಾನೆ ಓಂಕುಮಾರ್‌. ಈ ಹಿನ್ನೆಲೆಯಲ್ಲಿ ಪತ್ನಿಯ ಪ್ರೊಫೈಲ್‌ ಕ್ರಿಯೇಟ್‌ ಮಾಡಿದ್ದಾನೆ. ಆಕೆಗೆ ಯಾರಾದರೂ ಗಂಟುಬಿದ್ದು ಮದುವೆಯಾದರೆ ತನ್ನ ದಾರಿ ಸುಗಮ ಆಗಲಿದೆ ಎನ್ನುವುದು ಈತನ ಉದ್ದೇಶವಾಗಿತ್ತಂತೆ.
ಈ ಪ್ರೊಫೈಲ್‌ಗೆ ಆತ ಪತ್ನಿಯ ತಂದೆಯ ಮೊಬೈಲ್‌ ನಂಬರ್‌ ಕೊಟ್ಟಿದ್ದಾನೆ. ತಂದೆಗೆ ಸಿಕ್ಕಾಪಟ್ಟೆ ಕರೆಗಳು ಬರುತ್ತಿದ್ದಂತೆಯೇ ಅವರಿಗೆ ಆತಂಕ ಶುರುವಾಗಿದೆ. ಮಗಳಿಗೆ ವಿಷಯ ಕೇಳಿದಾಗ, ಆಕೆ ತನಗೆ ಏನೂ ಗೊತ್ತಿಲ್ಲ ಎಂದಿದ್ದಾಳೆ. ನಂತರ ಅವರು, ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಪೊಲೀಸರು ತನಿಖೆ ಕೈಗೊಂಡಾದ ಪತಿಯೇ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಪತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಒಳ್ಳೆಯ ಉದ್ದೇಶಕ್ಕೆ ಹೀಗೆ ಮಾಡಿದ್ದಾಗಿ ಹೇಳಿದ್ದಾನೆ. ಆಕೆಗೆ ಮದುವೆಯಾದರೆ, ನನಗೂ ದಾರಿ ಸುಗಮವಾಗುತ್ತದೆ, ಆಕೆ ಮೊದಲು ಮದುವೆಯಾದರೆ ವಿಚ್ಛೇದನದ ನಂತರ ಪರಿಹಾರ, ಅದೂ ಇದೂ ಎಂದೆಲ್ಲಾ ಕೊಡುವುದು ತಪ್ಪಬಹುದು ಎಂಬ ಉದ್ದೇಶದಿಂದ ಮಾಡಿದ್ದೇನೆ. ಇಬ್ಬರಿಗೂ ಬೇರೆ ಬೇರೆ ಮದುವೆಯಾದರೆ ಇಬ್ಬರಿಗೂ ಒಳ್ಳೆಯದಾಗಲಿದೆ ಎಂದು ಮಾಡಿದ್ದೆ ವಿನಾ ಏನೂ ದುರುದ್ದೇಶ ಇರಲಿಲ್ಲ ಎಂದಿದ್ದಾನೆ. ಆದರೆ ಈ ಕೃತ್ಯ ಎಸಗಿದ್ದಕ್ಕಾಗಿ ಆತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...