‘ತಿಥಿ’ ಕಥೆಗಾರ ಈರೇಗೌಡರ ಲೈಫ್ ಸ್ಟೋರಿ ಓದಿದ್ದೀರಾ..?

Date:

ಕನ್ನಡದಲ್ಲಿ ಭಾರೀ ಹವಾ ಮಾಡಿತ್ತು ‘ತಿಥಿ ’ ಸಿನಿಮಾ. ಅದು ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ತನಕವೂ ಭಾರೀ ಸದ್ದು ಮಾಡಿದ್ದು ನಿಮಗೆ ಗೊತ್ತೇ ಇದೆ. ಆ ಚಿತ್ರದ ಕಥೆ, ಸಂಭಾಷಣಕಾರ ಮಂಡ್ಯದ ಈರೇಗೌಡರ ಬಗ್ಗೆ ಕೆಲವರಿಗೆ ಗೊತ್ತಿಲ್ಲದೇ ಇದ್ದಿರಬಹುದು. ಆದರೆ ತಿಥಿ ಫಿಲಂ ಫೇಮಸ್ ಆದ ಕೂಡಲೇ ಈರೇಗೌಡರು ಯಾರು ಎನ್ನುವುದು ಗೊತ್ತಾಯಿತು.
ಹಿರೆಗೌಡರು ಮೂಲತಃ ಮಂಡ್ಯದ ನೋದೆಕೊಪ್ಪಲು ಗ್ರಾಮದವರು. ಚಿಕ್ಕಂದಿನಿಂದಲೇ ಮನೆಯ ಜವಾಬ್ದಾರಿ ಇದ್ದಿದ್ದರಿಂದ ಈರೇಗೌಡರಿಗೆ ಎಸ್.ಎಸ್.ಎಲ್. ಸಿ.ಯಿಂದ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. ಮನೆಯ ನಿರ್ವಹಣೆಗಾಗಿ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಸಿಗುತ್ತಿದ್ದ ಸಂಬಳ ಮನೆ ನಿರ್ವಹಣೆ ಮತ್ತು ಜೀವನಕ್ಕೆ ಸಾಲದ ಕಾರಣ ಸ್ನೇಹಿತರ ಮಾತಿನಂತೆ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ರು.
ಅಂದರೆ, ಹೀರೇಗೌಡ ಸಾಧನೆಯ ಮೊದಲನೆ ಮೆಟ್ಟಿಲು ಹತ್ತಿದ್ದು ಬೆಂಗಳೂರಿಗೆ ಬಂದಾಗಲೇ. ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಅರಸಿ ಬಂದಿದ್ದು, ಮೊದಲಿಗೆ ತಿಥಿ ಸಿನಿಮಾದ ನಿರ್ದೇಶಕ ರಾಮರೆಡ್ಡಿ ಅವರ ಮನೆಗೆ. ರಾಮರೆಡ್ಡಿ ಅವರ ಮನೆಯಲ್ಲಿ ಕೆಲಸ ಮಾಡೋ ಸಮಯದಲ್ಲಿ ಹೀರೇಗೌಡ ಅವರಿಗೆ ರಾಮರೆಡ್ಡಿ ಅವರ ಪರಿಚಯವಾಗುತ್ತೆ.
ನೋಡಿ, ಚಿಕ್ಕಂದಿನಿಂದಲೇ ಒಟ್ಟೊಟ್ಟಿಗೆ ಬೆಳೆದ ರಾಮ್ ಮತ್ತು ಹೀರೆಗೌಡರ ಬಾಂಧವ್ಯ ತುಂಬಾ ಗಟ್ಟಿ ಆಗುತ್ತಾ ಬಂತು. ಮೂರು ವರ್ಷದ ನಂತರ ತಾಯಿಯನ್ನ ಕಳೆದುಕೊಂಡ ಈರೇಗೌಡರು ಮನೆಗೆ ಹಿಂತಿರುಗೋ ಆಲೋಚನೆ ಮಾಡುತ್ತಾರೆ. ಆದ್ರೆ ರಾಮ್ ಅವರ ಸ್ನೇಹ ಮತ್ತು ರಾಮ್ ಅವರ ಮನೆಯವರ ಪ್ರೀತಿ ಈರೇಗೌಡರನ್ನ ರಾಮ್ ರೆಡ್ಡಿ ಅವ್ರ ಮನೆಯಲ್ಲಿ ಒಬ್ಬರನ್ನಾಗಿ ಮಾಡಿ ಬಿಡುತ್ತೆ.
ಸೆಕ್ಯೂರಿಟಿ ಕೆಲಸ ಸಾಕಾಗಿದ್ದ ಈರೇಗೌಡರು ರಾಮ್ ರೆಡ್ಡಿ ಅವ್ರ ತಾಯಿ ಅನಿತಾ ರೆಡ್ಡಿ ಅವ್ರ ಬಳಿ ಆಫೀಸ್ ಬಾಯ್ ಆಗಿ ಸೇರಿಕೊಂಡು ಅನಿತಾ ಅವ್ರ ಜೊತೆ ಜೊತೆಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಜೀವನ ಮುಂದುವರೆಯುತ್ತಾ ಏನಾದ್ರು ಸಾಧನೆ ಮಾಡಬೇಕು ಅನ್ನೋ ಇಂಗಿತ ಮಾತ್ರ ಹೀರೇಗೌಡರಿಗೆ ಎಂದೂ ಕಡಿಮೆ ಆಗಲಿಲ್ಲ.
ಈರೇಗೌಡರು, ಸಮಾಜಸೇವಕಿ ಅನಿತಾ ರೆಡ್ಡಿ ಅವ್ರ ಜೊತೆ ಕಾರ್ಯಕ್ರಮಗಳಿಗೆ ಹೋದಾಗ ಕ್ಯಾಮೆರಾ ವರ್ಕ್ ಮಾಡೋದನ್ನ ಅಭ್ಯಾಸ ಮಾಡಿಕೊಳ್ತಾ ಇದ್ರು. ಅಷ್ಟರ ಹೊತ್ತಿಗೆ ಸ್ನೇಹಿತ ರಾಮ್ ಕೂಡ ವಿದೇಶದಿಂದ ತಮ್ಮ ಪದವಿ ವ್ಯಾಸಂಗವನ್ನ ಮುಗಿಸಿಕೊಂಡು ಬಂದಿದ್ರು. ಇಬ್ಬರು ಸ್ನೇಹಿತರು ಸೇರಿ ನಾವ್ಯಾಕೆ ಸಿನಿಮಾ ಮಾಡಬಾರದು ಅನ್ನೋ ನಿರ್ಧಾರಕ್ಕೆ ಬಂದ್ರು. ಅದರಂತೆ ಒಂದು ಕಿರುಚಿತ್ರ ಮಾಡಿ ಅದರಿಂದ ಜನರ ಮೆಚ್ಚುಗೆಯನ್ನ ಪಡೆದ್ರು. ನಂತ್ರ ಶುರುವಾಗಿದ್ದೇ ತಿಥಿ ಸಿನಿಮಾ ತಯಾರಿ.

ಸಿನಿಮಾ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಾಗ ರಾಮ್ ಮತ್ತು ಈರೇಗೌಡ ಇಬ್ಬರು ನೋದೆಕೊಪ್ಪಲಿಗೆ ಭೇಟಿ ನೀಡುತ್ತಾರೆ. ಆಗ ಅಲ್ಲಿಯ ಸುಡುಗಾಡಿನ ಕತೆಯನ್ನ ಏಕೆ ಮಾಡಬಾರದು ಅಂತ ತೀರ್ಮಾನಿಸಿ ಸಿನಿಮಾ ತಯಾರಿ ಮಾಡಿಕೊಳ್ತಾರೆ. ಐದು ವರ್ಷದ ಪರಿಶ್ರಮದಿಂದ ತಿಥಿ ಸಿನಿಮಾ ತೆರೆಗೆ ಬಂದು ಅಪಾರ ಜನಮೆಚ್ಚುಗೆ ಗಳಿಸಿದ್ದಲ್ಲದೆ, ದೊಡ್ಡ ದಾಖಲೆಯನ್ನೇ ನಿರ್ಮಿಸಿತು.
ತಿಥಿ ಚಿತ್ರ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಪಡೆದುಕೊಂಡಿದೆ. ಇನ್ನೂ ವಿಶೇಷ ಅಂದ್ರೆ ತಮ್ಮದೇ ನೆಲದ ಪ್ರತಿಭೆಗಳನ್ನು ಗುರುತಿಸಿ ಚಿತ್ರಕ್ಕೆ ಹೀರೇಗೌಡ ಅವರು ಬರೆದಿರೋ ಸಂಭಾಷಣೆಗೆ ಅತ್ಯುತ್ತಮ ಸಂಭಾಷಣೆ ರಾಜ್ಯ ಪ್ರಶಸ್ತಿ ನೀಡಲಾಗಿದೆ. ಇಷ್ಟು ವರ್ಷದ ಶ್ರಮದ ಫಲವಾಗಿ ಜನರಿಂದ ಒಳ್ಳೆ ಪ್ರಶಂಸೆ ಸಿಕ್ಕಿರೋದು ಹೀರೇಗೌಡರ ಸಾಧನೆಗೆ ಮತ್ತಷ್ಟು ಸ್ಪೂರ್ತಿಯಾಗಿದೆ.
ಒಟ್ಟಾರೆ ನಮ್ಮ ದೇಸಿ ಸೊಗಡನ್ನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುವಂತೆ ಮಾಡಿದ ಮಂಡ್ಯದ ಯುವಕ ಈರೇಗೌಡರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಲೇ ಬೇಕು.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...