ತಿನ್ನೋದಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಚಾಕೋಲೆಟ್ !

Date:

ಚಾಕಲೆಟ್ ತಿಂದರೆ ಹಲ್ಲು ಹುಳುಕಾಗುತ್ತದೆ ಅನ್ನೋದು ಗೊತ್ತು, ಆದರೆ ಡಾರ್ಕ್ ಚಾಕಲೇಟ್ ತಿಂದರೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಗೊತ್ತಾ? ಶೀತ, ನೆಗಡಿಯಿಂದ ಹಿಡಿದು ಹೃದಯದ ಆರೋಗ್ಯದವರೆಗೂ ಎಲ್ಲ ಸಮಸ್ಯೆಯನ್ನು ಇದು ನಿವಾರಿಸಬಲ್ಲದು. ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಎಂಬುದು ಈಗಾಗಲೇ ವರದಿಯೊಂದರ ಪ್ರಕಾರ ತಿಳಿದಿದೆ. ಈ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಕೆಟ್ಟ ಮೂಡನ್ನು ಬೆಸ್ಟ್ ಮೂಡ್ ಆಗಿ ಮಾಡಲು, ಒಡೆದ ಹೃದಯ ಸರಿಪಡಿಸಲು ಬೆಸ್ಟ್ ಗಿಫ್ಟ್ ಅಂದ್ರೆ ಅದು ಚಾಕಲೇಟ್. ಅಷ್ಟೇ ಅಲ್ಲಾ ಇದರಿಂದ ತ್ವಚೆಯನ್ನೂ ಸುಂದರಗೊಳಿಸಬಹುದು ಗೊತ್ತಾ?
ಚಾಕಲೇಟ್ ಮಾಸ್ಕ್: ಲಿಕ್ವಿಡ್ ಚಾಕಲೇಟ್ ತೆಗೆದುಕೊಂಡು ಅದರ ಜೊತೆ ಆಲಿವ್ ಆಯಿಲ್ ಮತ್ತು ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಉಗುರು ಬಿಸಿ ನೀರಿನಲ್ಲಿ ವಾಷ್ ಮಾಡಿದ್ರೆ ಮುಖದ ತ್ವಚೆ ಹೆಚ್ಚುತ್ತದೆ.

ಚಾಕಲೇಟ್ ಸ್ಕ್ರಬ್: ಕೊಕೊ ಪೌಡರ್ ಮತ್ತು ಸಮುದ್ರ ಉಪ್ಪು ಜೊತೆಯಾಗಿ ಬೆರೆಸಿ ಬಿಸಿ ಮಾಡಿ. ನಂತರ ಅದನ್ನು ಇಳಿಸಿ ಅದಕ್ಕೆ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖ ಮತ್ತು ಕೈ ಮೇಲೆ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗಿ ಮುಖಕ್ಕೆ ಹೊಳಪು ಬರುತ್ತದೆ.

ಚಾಕಲೇಟ್ ಪೆಡಿಕ್ಯೂರ್: ಉತ್ತಮ ಸ್ಕಿನ್ ಪಡೆಯಲು ಚಾಕಲೇಟ್ ಸಹಕಾರಿ. ಚಾಕಲೇಟ್ ಬಳಸಿ ಪೆಡಿಕ್ಯೂರ್ ಮಾಡಿದರೆ ಮಾಯಿಶ್ಚರೈಸ್ ಆಗಿರುವ ನುಣುಪಾದ ಪಾದ ನಿಮ್ಮದಾಗುತ್ತದೆ.

ಚಾಕಲೇಟ್ ವ್ಯಾಕ್ಸ್ : ಚಾಕಲೇಟ್ ವ್ಯಾಕ್ಸ್ ಮಾಡಲು ಖೋಖೋವಾ, ಎಸೆನ್ಷಿಯಲ್ ಆಯಿಲ್, ಗ್ಲಿಸರಿನ್ ಮತ್ತು ವಿಟಮಿನ್ ಬೇಕು. ಇದರಿಂದ ವ್ಯಾಕ್ಸ್ ಮಾಡುವುದು ಹೆಚ್ಚು ನೋವು ಕೊಡುವುದಿಲ್ಲ. ಅಲ್ಲದೆ ಸ್ಕಿನ್ ಸಾಫ್ಟ್ ಆಗುತ್ತದೆ.

ಚಾಕಲೇಟ್ ಲಿಪ್ ಬಾಮ್: ಚಾಕಲೇಟ್ ಲಿಪ್ ಬಾಮ್ ಬಳಸಿದರೆ ತುಟಿ ಸಾಫ್ಟ್ ಆಗಿ ಮಾಯಿಶ್ಚರೈಸರ್ ಹೆಚ್ಚುತ್ತದೆ. ಇವೆಲ್ಲಾವುಗಳಿಂದ ಚಾಕೋಲೆಟ್ನಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...