ತುಪ್ಪದ ಹುಡುಗಿ ಖ್ಯಾತಿಯ ನಟಿ ರಾಗಿ ದ್ವಿವೇದಿ ಅರೆಸ್ಟ್ ಆಗಿದ್ದಾರೆ..!
ಇತ್ತೀಚೆಗೆ ಬಾರ್ ವೊಂದರಲ್ಲಿ ನಡೆದ ಗಲಾಟೆಯಲ್ಲಿ ರಾಗಿಣಿ ಅವರ ಹೆಸರು ತಳಕು ಹಾಕಿಕೊಂಡಿತ್ತು. ಅದೇ ರಂಪಾಟಕ್ಕೆ ಸಂಬಂಧಪಟ್ಟಂತೆ ರಾಗಿಣಿ ಅರೆಸ್ಟ್ ಆದರೇ? ಇಲ್ಲ..ರಾಗಿಣಿ ಅರೆಸ್ಟ್ ಆಗಿದ್ದು ಅದಕ್ಕಲ್ಲ.
ಇದು ರಿಯಲ್ ಅಲ್ಲ ರೀಲ್ ನದ್ದು. ಡೈರೆಕ್ಟರ್ ಪ್ರೇಮ್ ಹೀರೋ ಆಗಿ ನಟಿಸುತ್ತಿರುವ ಗಾಂಧಿಗಿರಿ ಸಿನಿಮಾದಲ್ಲಿ. ಈ ಸಿನಿಮಾಕ್ಕೆ ರಾಗಿಣಿ ನಾಯಕಿ . ರಾಗಿಣಿ ಕೋಳ ಹಾಕಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ. ಎಲ್ಲರೂ ಬಾರ್ ಗಲಾಟೆ ವಿಷಯ ಎಂದು ಕೊಂಡಿದ್ದಾರೆ. ಆದರೆ, ಇದು ಬಾರ್ ಗಲಾಟೆಯ ಸುದ್ದಿಯಲ್ಲ. ಅದು ಗಾಂಧಿಗಿರಿ ಸಿನಿಮಾದ ಫೋಟೋ…
ರಾಗಿಣಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದಾದ ಮೇಲೊಂದರಂತೆ ರಾಗಿಣಿ ಸಿನಿಮಾಗಳು ರಿಲೀಸ್ ಆಗಲಿವೆ. ರಾಗಿಣಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.