ತೂಗುದೀಪ ಅವರ ಮೈಸೂರಿನ ಮನೆ ಕಟ್ಟಿಸಿ ಕೊಟ್ಟದ್ದು ಅಣ್ಣಾವ್ರಲ್ಲ.!

Date:

ತೂಗುದೀಪ ಶ್ರೀನಿವಾಸ್ ಮತ್ತು ಅಣ್ಣಾವ್ರು ತುಂಬಾ ಕ್ಲೋಸ್ ಫ್ರೆಂಡ್ಸ್. ಅಣ್ಣಾವ್ರು ಅಭಿನಯಿಸಿದ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ ಅವರು ಇದ್ದೇ ಇರುತ್ತಾರೆ ಬಿಡಿ ಎಂದು ಜನ ಮಾತನಾಡಿಕೊಳ್ಳುವಷ್ಟು ಅಣ್ಣಾವ್ರು ಮತ್ತು ತೂಗುದೀಪ ಶ್ರೀನಿವಾಸ್ ಅವರ ನಡುವೆ ಸ್ನೇಹ ಬಾಂಧವ್ಯವಿತ್ತು.

 

 

ಇನ್ನು ತೂಗುದೀಪ ಶ್ರೀನಿವಾಸ ಅವರಿಗೆ ಅಣ್ಣಾವ್ರು ಹಲವಾರು ಸಹಾಯವನ್ನ ಮಾಡಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಅದರಲ್ಲಿ ಮೈಸೂರಿನಲ್ಲಿರುವ ಮುಪಾ ಕೃಪಾ ಎಂಬ ಮನೆ ಯನ್ನು ಅಣ್ಣಾವ್ರೇ ತೂಗುದೀಪ ಶ್ರೀನಿವಾಸ್ ಅವರಿಗೆ ಕಟ್ಟಿಸಿಕೊಟ್ಟಿದ್ದರು ಎಂದು ಹೇಳಲಾಗುತ್ತಿತ್ತು. ಹೌದು ಈ ಮನೆಯನ್ನು ಅಣ್ಣಾವ್ರು ತೂಗುದೀಪ ಶ್ರೀನಿವಾಸ ಅವರಿಗೆ ಕಟ್ಟಿಸಿಕೊಟ್ಟಿದ್ದಾರೆ ಎಂಬ ಮಾತು ಇತ್ತು ಅದಕ್ಕೆ ಅವರ ಮನೆಗೆ ಮುಪಾ ಕೃಪಾ ಅಂದರೆ ಮುತ್ತುರಾಜು ಪಾರ್ವತಿ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿತ್ತು.

 

 

ಆದರೆ ಇದೀಗ ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ವೇಳೆ ದರ್ಶನ್ ಅವರು ಆ ಮನೆ ಕಟ್ಟಿಸಿದಕ್ಕೆ ಕಾರಣ ಏನು ಮತ್ತು ಹೇಗೆ ಕಟ್ಟಿಸಿದರು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಹೌದು ತೂಗುದೀಪ ಶ್ರೀನಿವಾಸ ಅವರಿಗೆ ಚಿತ್ರಗಳಲ್ಲಿ ಅವಕಾಶಗಳಿಲ್ಲದ ಸಂದರ್ಭದಲ್ಲಿ ಅವರು ಮನೆಯಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ಬಂದು ನಾಟಕ ಪ್ರದರ್ಶನ ಮಾಡಿ ದುಡ್ಡು ಸಂಪಾದನೆ ಮಾಡಿದ್ದರಂತೆ. ಹೀಗೆ ಸಂಪಾದಿಸಿದ ಹಣವನ್ನೆಲ್ಲ ಸೇರಿಸಿ ಮೈಸೂರಿನಲ್ಲಿ ಆ ಮನೆಯನ್ನು ಕಟ್ಟಿಸಲಾಯಿತು ಎಂದು ಸ್ವತಃ ದರ್ಶನ್ ಅವರೇ ಹೇಳಿದರು.  ಆ ಮನೆ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಕಾರಣ ಉತ್ತರ ಕರ್ನಾಟಕದ ಜನತೆ ಎಂದು ಡಿ ಬಾಸ್ ಹೇಳಿದರು.

 

 

ಈ ಮೂಲಕ ರಾಜಣ್ಣ ಅವರು ಆ ಮನೆಯನ್ನು ಕಟ್ಟಿಸಿ ಕೊಟ್ಟಿದ್ದರು ಅದಕ್ಕೆ ಆ ಮನೆಗೆ ಮುಪಾ ಕೃಪಾ ಎಂದು ಹೆಸರಿಡಲಾಗಿದೆ ಎಂದು ಹಬ್ಬಿದ್ದ ಸುದ್ದಿಗೆ ದರ್ಶನ್ ಅವರು ಸ್ವಂತ ದುಡ್ಡಿನಿಂದ ಕಟ್ಟಿಸಿದ ಮನೆ ಎಂದು ಬ್ರೇಕ್ ಹಾಕಿದರು. ಈ ಮನೆ ವಿಷಯವನ್ನ ಸ್ವತಃ ದರ್ಶನ್ ಅವರೇ ರಾಬರ್ಟ್ ಪ್ರೀ ರಿಲೀಸ್ ಇವೆಂಟ್ ವೇದಿಕೆ ಮೇಲೆ ಹೇಳಿದರು.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...