ಕುಮಾರಸ್ವಾಮಿ ಚುನಾವಣೆ ಪ್ರಚಾರಕ್ಕೆ ಹೋದ ಕಡೆಯಲ್ಲಿ ಯಾಕೆ ಅಳುತ್ತಾರೆ ಎಂಬುದೇ ಗೊತ್ತಾಗ್ತಿಲ್ಲ. ಕಣ್ಣೀರು ಹಾಕಿದರೆ ಓಟು ಬರುತ್ತದೆ ಎಂಬ ಭ್ರಮೆಯಲ್ಲಿ ಅವರು ಇದ್ದಾರೆ ಎಂದು ಟೀಕಿಸಿದ ಈಶ್ವರಪ್ಪ, ಜೆಡಿಎಸ್ ಚಿಹ್ನೆ ತೆನೆಹೊತ್ತ ಮಹಿಳೆ ಬದಲಿಗೆ ಕಣ್ಣೀರಿಡುವ ಮಹಿಳೆ ಆಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಹಾಗು ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕೈಗೊಳ್ಳುವ ನಿಲುವಿನ ಮೇಲೆ ರಾಜಕೀಯ ಬದಲಾವಣೆ ಆಗಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾವುದೆ ಕಾರಣಕ್ಕು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.