ಮೈತ್ರಿ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ನಡವಳಿಕೆ ಸರಿಯಿಲ್ಲ ಎಂದು ಕಾಂಗ್ರೆಸ್ ಮುಖಂಡ ಚಲುವರಾಸ್ವಾಮಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಸಿಎಂ ಹೆಚ್.ಡಿಕೆ ಭವಿಷ್ಯ ಅವರ ಕೈನಲ್ಲಿ ಇದೆ, ಇದಲ್ಲದೇ 37ಸೀಟುಗಳನ್ನು ಗೆದ್ದಿರುವ ಜೆಡಿಎಸ್‌ನವರು ಕಾಂಗ್ರೆಸ್‌ನವರಿಗೆ ಎಚ್ಚರಿಕೆ ಕೊಡ್ತಾರೆ ಅಂತ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ. ಇನ್ನು ಮನ್‌ಮೂಲ್ ಚುನಾವಣೆ ನಡೆಯದಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿರುವ ಅವರು ರಾಜ್ಯದಲ್ಲಿ ಮೈತ್ರಿ ಸರಕಾರವಿದೆ ಆದ್ರೆ, ಇಲ್ಯಾಕೆ ಚುನಾವಣೆಯನ್ನು ನಡೆಸುತ್ತಿಲ್ಲ ಅಂಥ ಬೇಸರ ಪ್ರಶ್ನೆ ಮಾಡಿದರು. ಅಧಿಕಾರಿಗಳು ರಾಜ್ಯ ಸರಕಾರದ ಗುಲಾಮರಾಗಿದ್ದಾರೆ ಅಂತ ಹೇಳಿದರು.