ತ. ನಾಡಿನಲ್ಲಿ ಮತ್ತೆ ಲಾಕ್ ಡೌನ್

0
43

ತಮಿಳುನಾಡು ಸರ್ಕಾರ ಕೋವಿಡ್ ಹರಡುವಿಕೆ ತಡೆಯಲು ಲಾಕ್‌ಡೌನ್ ಜಾರಿಗೊಳಿಸಿತ್ತು. ಜುಲೈ 12ರ ತನಕ ಅದನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ವಿನಾಯಿತಿಗಳನ್ನು ಸಹ ನೀಡಲಾಗಿದೆ.
ಶುಕ್ರವಾರ ತಮಿಳುನಾಡು ಸರ್ಕಾರ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರೆಸ್ಟೋರೆಂಟ್, ಅಮ್ಯೂಸ್‌ಮೆಂಟ್ ಪಾರ್ಕ್‌ಗಳನ್ನು ಶೇ 50ರಷ್ಟು ಜನರೊಂದಿಗೆ ತೆರೆಯಲು ಅನುಮತಿ ನೀಡಿದೆ.
ಅಂಗಡಿಗಳನ್ನು ಸಂಜೆ 7 ಗಂಟೆಯ ತನಕ ತೆರೆಯಲು ಅನುಮತಿ ನೀಡಲಾಗಿತ್ತು. ಅದನ್ನು ರಾತ್ರಿ 8 ಗಂಟೆಯ ತನಕ ವಿಸ್ತರಣೆ ಮಾಡಲಾಗಿದೆ. ಹೋಟೆಲ್, ಟೀ ಶಾಪ್‌ಗಳು ಶೇ 50ರಷ್ಟು ಜನರೊಂದಿಗೆ ತೆರೆಯಲು ಒಪ್ಪಿಗೆ ಕೊಡಲಾಗಿದೆ.


ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಅಂತರ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೆ ಶೇ 50ರಷ್ಟು ಪ್ರಯಾಣಿಕರನ್ನು ಹೊತ್ತು ಬಸ್‌ಗಳು ಸಂಚಾರ ನಡೆಸಬಹುದಾಗಿದೆ.
24 ಗಂಟೆಯಲ್ಲಿ ತಮಿಳುನಾಡು ರಾಜ್ಯದಲ್ಲಿ 4,230 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 24,88,407ಕ್ಕೆ ಏರಿಕೆಯಾಗಿದೆ..


ರಾಜ್ಯದಲ್ಲಿ 24 ಗಂಟೆಯಲ್ಲಿ 97 ಜನರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 32,818/
4,952 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಗುಣಮುಖಗೊಂಡವರು 24,18,882.
ರಾಜ್ಯದಲ್ಲಿ ಇದುವರೆಗೂ 3,31,62,714 ಮಾದರಿಗಳ ಪರೀಕ್ಷೆ ಮಾಡಲಾಗಿದೆ. 24 ಗಂಟೆಯಲ್ಲಿ 1,60,810 ಮಾದರಿಗಳ ಪರೀಕ್ಷೆ ನಡೆದಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 36,707.
24 ಗಂಟೆಯಲ್ಲಿ ಚೆನ್ನೈನಲ್ಲಿ 238, ಕೊಯಮತ್ತೂರು 486, ಈರೋಡ್ 395, ಸೇಲಂನಲ್ಲಿ 268, ತಿಪ್ಪೂರು 243 ಹೊಸ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಹೇಳಿದೆ.

LEAVE A REPLY

Please enter your comment!
Please enter your name here