ನಿಮ್ಮ ನೆಚ್ಚಿನ ವೆಬ್ ಪೋರ್ಟಲ್ ದಿ ನ್ಯೂ ಇಂಡಿಯನ್ ಟೈಮ್ಸ್ ಮಾಲೀಕ, ನಟ ರಘುಭಟ್ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಸಾಹಸ ಮೆರೆದಿದ್ದಾರೆ.
ಗುರುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಸಿಗ್ಮಾಮಾಲ್ ನಲ್ಲಿ ಪತ್ನಿ ಸುಗುಣ ಜೊತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡಿ ಮನೆಗೆ ವಾಪಸ್ ಆಗುತ್ತಿದ್ದಾಗ ಆರ್ ಎಂ ಝೆಡ್ ಬಳಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರು ದುಷ್ಕರ್ಮಿಗಳು ಕಾರೊಂದನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದರು.
ಅದನ್ನು ಗಮಿಸಿದ ಸುಗುಣ ಕೂಡಲೇ ಪತಿ ರಘುಭಟ್ ಗಮನಕ್ಕೆ ತಂದಿದ್ದಾರೆ. ತಕ್ಷಣ ರಘುಭಟ್ ಕಾರನ್ನು ಯೂಟರ್ನ್ ತೆಗೆದುಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಅವರನ್ನು ಸುಮಾರು ಎರಡು ಕಿಲೋಮೀಟರ್ ಚೇಸ್ ಮಾಡಿ, ಸೆಂಟ್‌ಜಾನ್ ಸರ್ಕಲ್ ಬಳಿ ಹಿಡಿದಿದ್ದಾರೆ. ನಂತರ ಹಲಸೂರು ಪೊಲೀಸರು ಸ್ಥಳಕ್ಕೆ ಬಂದು ದುಷ್ಕರ್ಮಿಗಳನ್ನು ವಶಕ್ಕೆ ಪಡೆದು ರಘುಭಟ್ ಕೆಲಸವನ್ನು ಶ್ಲಾಘಿಸಿದ್ದಾರೆ.