ರಾಬರ್ಟ್ ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ ಸದ್ಯ ಚಿತ್ರತಂಡದಿಂದ ಬಂದಿರುವ ಹೊಸ ಸುದ್ದಿ ಎಂದರೆ ಟಗರು ಚಿತ್ರದಲ್ಲಿ ಮಿಂಚನ್ನು ಹರಿಸಿದ ಖಡಕ್ ವಿಲನ್ ಇದೀಗ ರಾಬರ್ಟ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಟಗರು ಸಿನಿಮಾ ನಿರ್ದೇಶಕ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಬ್ಲಾಕ್ ಬಸ್ಟರ್ ಸಿನಿಮಾ ಶಿವಣ್ಣ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಕರ್ನಾಟಕದಲ್ಲಿ ಬಾರಿ ಹವಾ ಸೃಷ್ಟಿಮಾಡಿತ್ತು ಅದರಲ್ಲೂ ಡಾಲಿ ಧನಂಜಯ್ ಮತ್ತು ಕಾಕ್ರೋಚ್ ಸುದೀ, ಚಿಟ್ಟೆ ವಸಿಷ್ಠ ಅವರ ಪಾತ್ರಗಳು
ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದುಬಿಟ್ಟಿತ್ತು ಇದೀಗ ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ನಿರ್ವಹಿಸಿದ್ದ ಸುದೀ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಭರ್ಜರಿ ಆಫರ್ ಸಿಕ್ಕಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ರಾಬರ್ಟ್ ಚಿತ್ರದಲ್ಲಿ ನಾಯಕ ದರ್ಶನ್ ವಿರುದ್ಧ ಕಾಕ್ರೋಚ್ ಸುಧೀರ್ ಸೆಣಸಾಟ ನಡೆಸಲಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಮುಹೂರ್ತ ಆಚರಿಸಿಕೊಂಡ ರಾಬರ್ಟ್ ಚಿತ್ರದ ಶೂಟಿಂಗ್ ಈಗಾಗಲೇ ಭರದಿಂದ ಸಾಗಿದ್ದು ಇದೇ ತಿಂಗಳ 18ರಂದು ಸುಧೀರ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.