ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ಡಿ ಬಾಸ್ ದರ್ಶನ್ ಸಿನಿಮಾಗಳು ಗಳಿಕೆಯಲ್ಲಿ ದಾಖಲೆ ಬರೆಯುವುದು ಹೊಸದೇನಲ್ಲ. ಈಗ ‘ಕುರುಕ್ಷೇತ್ರ’ ಅವರ ಹಿಂದಿನ ದಾಖಲೆಗಳನ್ನು ಧೂಳೀಪಟ ಮಾಡಿದೆ ಎನ್ನಲಾಗಿದೆ.
ಬಿಡುಗಡೆಗೂ ಮೊದಲೇ 20 ಕೋಟಿ ರೂ. ಬ್ಯುಸಿನೆಸ್ ಮಾಡಿದ್ದ ‘ಕುರುಕ್ಷೇತ್ರ’ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಎರಡನೇ ದಿನ ಕುರುಕ್ಷೇತ್ರದ ಗಳಿಕೆ ಬರೋಬ್ಬರಿ 16 ಕೋಟಿ ರೂ ಗಳಿಸಿದೆ ಎನ್ನಲಾಗ್ತಿದೆ .