ಬೆಂಗಳೂರು: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರು ಕೊಲೆ ಮಾಡಿದ್ದಾರೆ ಎಂದು ಸಾಬೀತು ಮಾಡಲು ಅನೇಕ ಸಾಕ್ಷಿಗಳು ಸಿಗುತ್ತಿವೆ ಎನ್ನಲಾಗಿದೆ. ಪ್ರಕರಣದ ಸಂಬಂಧ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟನಿಗೆ ವಿಚಾರಣೆಯ ಭೀತಿ ಎದುರಾಗಿದೆ. ಹೌದು. ಸ್ಟೋನಿ ಬ್ರೂಕ್ ಪಬ್‍ನಲ್ಲಿ ಚಿಕ್ಕಣ್ಣ ಅಲ್ಲದೇ ಇನ್ನೊಬ್ಬ ನಟನಿದ್ದ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಚಿಕ್ಕಣ್ಣ, ದರ್ಶನ್ ಬಿಟ್ಟು ಮತ್ತೊಬ್ಬ ನಟ ಇದ್ದರು. ಪಾರ್ಟಿ ನಂತರ ಚಿಕ್ಕಣ್ಣ ಮತ್ತು ಆ ನಟ ಇಬ್ರೂ ಒಟ್ಟಿಗೆ ತೆರಳಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಪಾರ್ಟಿಯಲ್ಲಿ ಮತ್ತೊಬ್ಬ ನಟ ಕೂಡ ಇದ್ದರು ಎನ್ನಲಾಗಿತ್ತು. ಅವರು ಬೇರೆ ಯಾರು ಅಲ್ಲ ದರ್ಶನ್ ಆಪ್ತರಾಗಿರುವ ನಟ ಯಶಸ್ ಸೂರ್ಯ ಎಂದು ವರದಿ ಆಗಿದೆ. ದರ್ಶನ್ ಆಪ್ತ ಹಾಗೂ ಗರಡಿ ಸಿನಿಮಾದಲ್ಲಿ ನಟಿಸಿರುವ ನಟ ಯಶಸ್ ಸೂರ್ಯ ಕೂಡ ಆರ್ಆರ್ ನಗರದ ರೆಸ್ಟೋರೆಂಟ್ ನಲ್ಲಿ ನಡೆದ ಪಾರ್ಟಿಯಲ್ಲಿ ಇದ್ದರು ಎನ್ನಲಾಗ್ತಿದೆ. ಇದೀಗ ನಟ ಯಶಸ್ ಸೂರ್ಯ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆಯಂತೆ.
ದರ್ಶನ್, ಚಿಕ್ಕಣ್ಣ ಜೊತೆ ಮತ್ತೊಬ್ಬ ನಟ ಪಾರ್ಟಿಯಲ್ಲಿ ಎಂಟ್ರಿ !
Date: