ದರ್ಶನ್ ಬೇಲ್ ಬಗ್ಗೆ ಸುಪ್ರೀಂ ಅತೃಪ್ತಿ: “ದಾಸ”ನಿಗೆ ಎದುರಾಗುತ್ತಾ ಸಂಕಷ್ಟ?
ಬೆಂಗಳೂರು: ರೆಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಇಂದು ಅವರುಗಳಿಗೆ ಮಹತ್ವದ ದಿನ. ಹೈಕೋರ್ಟ್ ನೀಡಿರುವ ಜಾಮೀನು ಆದೇಶದ ವಿರುದ್ಧ ಸರ್ಕಾರದ ಪರ ವಕೀಲರು ಈಗಾಗಲೇ ವಾದ ಮುಗಿಸಿದ್ದು,
ಇಂದಿನ ವಿಚಾರಣೆಯಲ್ಲಿ ದರ್ಶನ್ ಪರ ಖ್ಯಾತ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಮ್ಮ ವಾದ ಮಂಡಿಸಲಿದ್ದಾರೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಮಹದೇವನ್ ಅವರ ನೇತೃತ್ವದ ದ್ವಿಸದಸ್ಯ ಪೀಠ ಇವತ್ತು ವಿಚಾರಣೆ ನಡೆಸಲಿದೆ. ಕಳೆದ ವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆರೋಪಿಗಳ ಜಾಮೀನು ನ್ಯಾಯಸಮ್ಮತವಾಯಿತೇ ಎಂಬುದರ ಬಗ್ಗೆ ಸುಳಿವು ನೀಡಿದೆ. ಇದರ ಪ್ರಕಾರ, ಇವತ್ತೇ ಅಂತಿಮ ತೀರ್ಪು ಹೊರಬರಬಹುದೆಂಬ ನಿರೀಕ್ಷೆ ಇದೆ.
ದರ್ಶನ್ ಜಾಮೀನು ಪಡೆದುಕೊಂಡಿದ್ದು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬ ಕಾರಣದ ಮೇಲೆ. ಆದರೆ, ಅವರು ಯಾವುದೇ ಸರ್ಜರಿ ಮಾಡಿಸಿಲ್ಲ ಹಾಗೂ ಸಾಕ್ಷಿ ಜೊತೆ ಕಾಣಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದು ಜಾಮೀನು ಶರತ್ತಿನ ಉಲ್ಲಂಘನೆ ಎಂಬ ಆರೋಪಗಳಿಗೆ ಕಾರಣವಾಗಿದೆ.