ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಾಗಿ ಸುಮಲತಾ ಪರ ಪ್ರಚಾರದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಸುಮಲತಾ ಅವರ ಪ್ರೆಸ್ಮೀಟ್ ನಲ್ಲಿ ಮತ್ತು ನಾಮಪತ್ರ ಸಲ್ಲಿಕೆ ಹಾಗೂ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಸುಮಲತಾ ಪರ ಪ್ರಚಾರದಲ್ಲಿ ಓಡಾಡುತ್ತಿಲ್ಲ. ಚುನಾವಣೆ ಮುಗಿಯುವ ತನಕವೂ ಪ್ರಚಾರದಲ್ಲಿರ್ತೀವಿ ಎಂದು ಹೇಳಿದ್ದರು.
ಆದರೆ ಅನಿವಾರ್ಯ ಕಾರಣ ಹಾಗೂ ಬಿಡುವಿಲ್ಲದ ಕೆಲಸಗಳಿಂದ ದರ್ಶನ್, ಯಶ್ ಪ್ರಚಾರಕ್ಕೆ ಹೋಗಿಲ್ಲ. ಆದರೆ, ಗಜಕೇಸರಿ ಬಲ ಸುಮಲತಾ ಅವರಿಗೆ ಇದ್ದೇ ಇದೆ. ಅವರಿಬ್ಬರೂ ಏಪ್ರಿಲ್ 2ರಿಂದ ನಿರಂತರವಾಗಿ ಪ್ರಚಾರಕ್ಕೆ ಹೋಗುತ್ತಾರಂತೆ.
ಸುದೀಪ್ ಏಪ್ರಿಲ್ 10ರಿಂದ ಪ್ರಚಾರಕ್ಕೆ ಹೋಗುತ್ತಾರೆ ಎಂದು ನಿನ್ನೆ ಸುದ್ದಿಯಾಗಿತ್ತು. ಆದರೆ, ಸುದೀಪ್ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಹರಿದಾಡಿದ್ದು ಸುಳ್ಳು ಸುದ್ದಿ ಎನ್ನಲಾಗಿದೆ. ಸುದೀಪ್ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ವಿಚಾರದದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಹಳೆಯ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿ, ಅವಧಿ ಮುಗಿದ ಮೇಲೆ ಹೊಸ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಹೋಗಿದ್ದು, ಅವರ ನಾಮಪತ್ರ ಅಸಿಂಧು ಆಗುವ ಸಾಧ್ಯತೆ ಇದೆ.