ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

admin
1 Min Read

ಕರ್ನಾಟಕದ ಬೆಡಗಿ ಪೂಜಾ ಹೆಗ್ಡೆ ತೆಲುಗಿನಲ್ಲಿ ನಂಬರ್ ಒನ್ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗಿನ ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಈಗಾಗಲೇ ಅಭಿನಯಿಸಿ ದೊಡ್ಡ ಹೆಸರು ಮಾಡಿರುವ ಪೂಜಾ ಹೆಗ್ಡೆ ಅವರಿಗೆ ಬಾಲಿವುಡ್ ನಿಂದಲೂ ಸಹ ದೊಡ್ಡ ದೊಡ್ಡ ಆಫರ್ ಗಳು ಬಂದಿದ್ದವು. ಬಾಲಿವುಡ್ ನ ಕೆಲ ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿರುವ ಪೂಜಾ ಹೆಗ್ಡೆ ಇದೀಗ ಕಾಲಿವುಡ್ ನತ್ತ ಮುಖ ಮಾಡಿದ್ದಾರೆ.

 

 

ಹೌದು ದಳಪತಿ ವಿಜಯ್ ಅಭಿನಯದ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆರಿಸಲಾಗಿದೆ. ವಿಜಯ್ ಅಭಿನಯದ 65 ನೇ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆ ಈ ಹಿಂದಿನಿಂದಲೂ ಸಾಕಷ್ಟು ನಡೆದಿತ್ತು. ಹಲವಾರು ನಟಿಯರ ಹೆಸರು ಕೇಳಿ ಬಂದರೂ ಸಹ ಇದೀಗ ಅಧಿಕೃತವಾಗಿ ಚಿತ್ರತಂಡ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ.

Share This Article
Leave a Comment