ದಾಖಲೆಯತ್ತ ಹೆಜ್ಜೆ ಇಟ್ಟ ಕುರುಕ್ಷೇತ್ರದ ಗಳಿಕೆ ಕೇಳಿದ್ರೆ ತಲೆ ಗಿರ ಗಿರ ಅನ್ನುತ್ತೆ..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್.. ಸ್ಯಾಂಡಲ್​ವುಡ್​ ಸಾರಥಿ… ಅಭಿಮಾನಿಗಳ ನೆಚ್ಚಿನ ದಾಸ.. ಪ್ರೀತಿಯ ಯಜಮಾನ.. ಕುರುಕ್ಷೇತ್ರದ ದುರ್ಯೋಧನ.. ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ..ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದರ್ಶನ್ ಸ್ಟಾರ್ ಗಿರಿ ಮತ್ತಷ್ಟು ಎತ್ತರಕ್ಕೆ ಹೋಗಿದೆ.. ಬಹು ಭಾಷೆಗಳಲ್ಲಿ ರಿಲೀಸ್ ಆಗಿರುವ ಕುರುಕ್ಷೇತ್ರ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಈ ಸಿನಿಮಾದ ಗಳಿಕೆ ಕೇಳಿದ್ರೆ ತಲೆ ಗಿರ ಗಿರ ಅನ್ನುತ್ತೆ..!
ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್ ಮೊದಲಾದ ಸ್ಟಾರ್ ನಟರು ಈ ಸಿನಿಮಾಕ್ಕೆ ಬಣ್ಣ ಹಚ್ಚಿದ್ದು, ದಾಖಲೆಯ ಕಲೆಕ್ಷನ್ ಮಾಡಿದೆ..!


ಯೆಸ್​ ಕುರುಕ್ಷೇತ್ರ 14 ದಿನಗಳಲ್ಲಿ ಬರೋಬ್ಬರಿ 97 ಕೋಟಿ ರೂ ಅನ್ನು ಗಳಿಸಿದೆ. ಮೊದಲ ನಾಲ್ಕು ದಿನಗಳಲ್ಲೇ ಬರೋಬ್ಬರಿ 35 ಕೋಟಿ ರೂಗಳಿಸಿತ್ತಂತೆ. ಇದಿಷ್ಟೇ ಅಲ್ಲದೆ ಕನ್ನಡ ಸ್ಯಾಟ್​ಲೈಟ್ ಹಕ್ಕು 9.5 ಕೋಟಿ ರೂಗಳಿಗೆ , ಆಡಿಯೋ ಹಕ್ಕು 1.5 ಕೋಟಿ ರೂಗಳಿಗೆ ಮಾರಾಟವಾಗಿದೆ. ಹಿಂದಿ, ತೆಲುಗು, ಮಲೆಯಾಳಂ ಮತ್ತು ತಮಿಳು ಸ್ಯಾಟಲೈಟ್​ ರೈಟ್ಸ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬರುತ್ತಿದೆಯಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದರು. ಅದಾದ ಬಳಿಕ ಈಗ ಕುರುಕ್ಷೇತ್ರದಲ್ಲಿ ಮಿಂಚಿದ್ದಾರೆ. ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಫಸ್ಟ್​ ಪ್ರಿಫರೆನ್ಸ್ ಅನ್ನೋ ದರ್ಶನ್ ಕುರುಕ್ಷೇತ್ರದಿಂದ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಿನಿರಂಗ ಬೆಳೀತಾ ಇದೆ ಅನ್ನೋದೇ ಖುಷಿ ವಿಚಾರ.

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...