ದಾಯಾದಿಗಳ ಮಧ್ಯೆ ಶುರುವಾದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ!
ಕೋಲಾರ: ದಾಯಾದಿಗಳ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪಡವನಹಳ್ಳಿಯಲ್ಲಿ ನಡೆದಿದೆ. ಮುನಿರಾಜು (35) ಕೊಲೆಯಾದ ವ್ಯಕ್ತಿಯಾಗಿದ್ದು, ಬೋರ್ ವೆಲ್ ಲಾರಿ ಹಾಗು ಮೆಣಸಿನ ಗಿಡ ಹಾಳು ಮಾಡಿದ್ದಾರೆಂದು ಮಧ್ಯ ರಾತ್ರಿ 12 ಗಂಟೆ ಸುಮಾರಿಗೆ ದಾಯಾದಿಗಳ ಮಧ್ಯೆ ಗಲಾಟೆ ಶುರುವಾಗಿದ್ದು, ಈ ವೇಳೇ ದಾಯಾದಿ ಮುನಿರಾಜು ಕೊಲೆಯಾಗಿದೆ. ಅಣ್ಣಯ್ಯಪ್ಪ, ವೀರಸ್ವಾಮಿ, ಸೋಮಶೇಖರ್, ಕಾಂತರಾಜು, ಭರತ್, ವೆಂಕಟೇಶ್, ಭಾಗ್ಯಮ್ಮ ಅವರಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ಮಾಲೂರು ಪೊಲೀಸರಿಂದ 4 ಜನರ ಬಂಧನ ಮಾಡಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಭೇಟಿ, ಪರಿಶೀಲನೆ ನಡೆಸಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.