ದಿಯಾ ರಿಲೀಸ್ ಡೇಟ್ ಫಿಕ್ಸ್ – ಟ್ರೇಲರ್ ನೋಡಿದ್ರೆ ಆ ದಿನಕ್ಕೆ ಕಾಯ್ತೀರಿ..!

Date:

ಚಂದನವನದಲ್ಲಿ ಹೊಸಬರ ಅಲೆ ಜೋರಾಗಿದೆ. ಹೊಸ ಹೊಸ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರ್ತಿದ್ದಾರೆ. ಹೊಸಬರಿಗೆ ಬಂಡವಾಳ ಹಾಕುವ ಧೈರ್ಯ ಮಾಡಿ, ಅವರನ್ನು ಪ್ರೋತ್ಸಾಹಿಸುವ, ಸ್ಯಾಂಡಲ್​ವುಡ್​ನಲ್ಲಿ ಹೊಸತನ ತರುವ ಪ್ರಯತ್ನವನ್ನು ಮಾಡುವ ನಿರ್ಮಾಪಕರ ಶ್ರದ್ಧೆ, ಆಸಕ್ತಿ ಹಾಗೂ ಇಚ್ಛಾಶಕ್ತಿಯನ್ನು ಮೆಚ್ಚಲೇ ಬೇಕು. ಅಂಥಾ ನಿರ್ಮಾಪಕರಲ್ಲಿ ಕೃಷ್ಣ ಚೈತನ್ಯ ಕೂಡ ಒಬ್ಬರಾಗಿದ್ದಾರೆ.
ಹೌದು ಪ್ರೊಡ್ಯೂಸರ್ ಕೃಷ್ಣ ಚೈತನ್ಯ ಅವರು ಹೊಸ ತಂಡದೊಂದಿಗೆ ಸದ್ದಿಲ್ಲದೆ ಒಂದು ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಹೆಸರು ‘ದಿಯಾ’ ಅಂತ. ದಿಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. 2 ನಿಮಿಷ 7 ಸೆಕೆಂಡ್ ಇರುವ ಟ್ರೇಲರ್ ಸಿನಿಮಾದ ಮೇಲೆ ಕುತೂಹಲವನ್ನು ಹುಟ್ಟುಹಾಕಿದೆ.
ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್​ ಚಿತ್ರದ ಇಬ್ಬರು ನಾಯಕರು. ಖುಷಿ ಚಿತ್ರದ ನಾಯಕಿ. ಇನ್ನು ಸ್ವರ್ಣಲತಾ ಪ್ರೊಡಕ್ಷನ್​​ನಡಿಯಲ್ಲಿ ಕೃಷ್ಣ ಚೈತನ್ಯ ಅವರು ನಿರ್ಮಿಸುತ್ತಿರುವ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು 6-5= 2 ಸಿನಿಮಾ ಖ್ಯಾತಿಯ ಡೈರೆಕ್ಟರ್ ಅಶೋಕ್ ಕೆ.ಎಸ್​ರವರು. ಇನ್ನುಳಿದಂತೆ ವಿಶಾಲ್ ವಿಠಲ್, ಸೌರಭ್ ವಾಘ್ ಮರೆ ಅವರ ಛಾಯಗ್ರಹಣವಿದೆ. ಅಜನೀಶ್​ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಲೆ ವರದರಾಜ್ ಕಾಮತ್​ ಅವರದ್ದು. ಪ್ರೊಡಕ್ಷನ್ ಹೊಣೆಯನ್ನು ಯತೀಶ್ ನಿಭಾಯಿಸಿದ್ದಾರೆ. ಇಂಚರಾ ವಿನಯಾ ಅವರ ವಸ್ತ್ರವಿನ್ಯಾಸ, ಖುರ್ಷಿದಾ ಬಾನು ವರ್ಣಾಲಂಕಾರ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರವೀಣ್ ಚನ್ನಪ್ಪ, ರಾಕೇಶ್ ಶ್ರೀನಿವಾಸ್, ದರ್ಶನ್ ಅಪೂರ್ವ, ಚಂದನ್, ಮತ್ತು ಭರತ್ ಡೈರೆಕ್ಷನ್ ಟೀಮ್​ನಲ್ಲಿ ಸಿನಿಮಾಕ್ಕಾಗಿ ಶ್ರಮಿಸಿದ್ದಾರೆ.
ಒಟ್ಟಿನಲ್ಲಿ ಯುವ, ಹೊಸಬರ ತಂಡವೊಂದು ದಿಯಾ ಸಿನಿಮಾ ಮಾಡಿದ್ದು, ಟ್ರೇಲರ್ ನೋಡಿದ್ರೆ ಇದೊಂದು ಪಕ್ಕಾ ಸಸ್ಪನ್ಸ್, ಥ್ರಿಲ್ಲರ್ ಮೂವಿ ಅನಿಸ್ತಿದೆ. ನವೆಂಬರ್ 8ರಂದು ಸಿನಿಮಾ ರಿಲೀಸ್ ಆಗಲಿದೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...