ದಿವ್ಯಾ ಗ್ಲಾಸ್ ಮೇಲೆ ಬರೆದು ಶಮಂತ್ ಗೆ ಹೇಳಿದ್ದೇನು?

Date:

ಈ ಹಿಂದೆ ಕಿತ್ತಾಟದಿಂದ ಸುದ್ದಿಯಾಗುತ್ತಿದ್ದ ದಿವ್ಯಾ ಸುರೇಶ್, ಶಮಂತ್ ನಡುವೆ ಒಂದು ಉತ್ತಮ ಬಾಂಧವ್ಯ ಶುರುವಾಗಿದೆ. ಇಬ್ಬರು ಮುದ್ದಾಗಿ ಮಾತನಾಡುತ್ತಾ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ಕ್ಯಾಪ್ಟನ್ ಬೆಡ್ ರೂಮ್‍ನಲ್ಲಿ ನಿಂತುಕೊಂಡು ದಿವ್ಯಾ ಸುರೇಶ್ ಅವರು ಶಮಂತ್ ನನ್ನು ವಿಶಿಲ್ ಹಾಕಿ ಕರೆದಿದ್ದಾರೆ. ಆಗ ಶಮಂತ್ ನೋಡಿದಾಗ, ದಿವ್ಯಾ ಗ್ಲಾಸ್ ಮೇಲೆ ಏನೋ ಬರೆದಿದ್ದಾರೆ. ಆಗ ಶಮಂತ್ ಏನು ಬರೆದೆ ಎಂದು ಕೇಳಿದಾಗ, ದಿವ್ಯಾ ನಾನು ಹೇಳುವುದಿಲ್ಲ ಎಂದು ನಗುತ್ತಾ ತಲೆ ಅಲ್ಲಾಡಿಸಿದ್ದಾರೆ. ಆಗ ಶಮಂತ್ ದಿವ್ಯಾ ಸುರೇಶ್ ಎಂದು ಬರೆದೆಯಾ ಎಂದು ಕೇಳಿದಾಗ ಇಲ್ಲ ಎಂದು ದಿವ್ಯಾ ಹೇಳಿದ್ದಾರೆ. ಆಗ ಸುರೇಶ್ ದಿವ್ಯಾ ಎಂದು ಬರೆದ್ಯಾ ಎಂದು ಕೇಳಿದಾಗ ಹೌದು ಎಂದು ಕೇಳಿದಾಗ ಇಬ್ಬರು ಒಟ್ಟಾಗಿ ನಕ್ಕಿದ್ದಾರೆ. ಆಗ ಶಮಂತ್ ನೀನು ಈಗ ಹೇಳಿಲ್ಲಾಂದ್ರೆ ನಾನು ಬಿಗ್‍ಬಾಸ್ ಮುಗಿದ ಮೇಲೆ ಮನೆಗೆ ಹೋಗಿ ನೋಡುತ್ತೇನೆ ಎಂದು ಶಮಂತ್ ಹೇಳಿದ್ದಾರೆ.

ಶಮಂತ್ ಲವ್ ಮಾಡೋಕೆ ಬಿಗ್‍ಬಾಸ್‍ಗೆ ಬಂದಿದ್ದಾರೆ ಎಂದು ದಿವ್ಯಾ ನೇರವಾಗಿ ಈ ಹಿಂದೆ ಶಮಂತ್‍ಗೆ ಹೇಳಿದ್ದರು. ಶಮಂತ್ ಕುರಿತಾಗಿ ದಿವ್ಯ ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಶಮಂತ್ ಮಾತನಾಡಿಸಲು ಪ್ರಯತ್ನಿಸಿದರೂ ದಿವ್ಯಾ ಹೆಚ್ಚಾಗಿ ಶಮಂತ್ ಜೊತೆಗೆ ಬೆರೆಯುತ್ತಿರಲಿಲ್ಲ. ಆದರೆ ಈ ಸೀಸನ್‍ನಲ್ಲಿ ಇಬ್ಬರು ತುಂಬಾ ಬದಲಾಗಿದ್ದಾರೆ. ಹೆಚ್ಚಾಗಿ ಮಾತನಾಡುತ್ತಾ ಕುಳಿತಿರುತ್ತಾರೆ.

ಶಮಂತ್ ದಿವ್ಯಾ ಮಧ್ಯೆ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ಅನ್ಯೋನ್ಯತೆ ಬೆಳೆದಿದೆ. ಇಬ್ಬರು ತಮಾಷೆಯಾಗಿ ಮಾತನಾಡುತ್ತಾ ಕಾಲ ಕಳೆಯುತ್ತಾರೆ. ಇಬ್ಬರ ಮಧ್ಯೆ ಮೊದಲಿದ್ದ ಯಾವುದೇ ಜಗಳವಿಲ್ಲ. ಒಳ್ಳೆಯ ಸ್ನೇಹಿತರಾಗಿ ಚೆನ್ನಾಗಿ ಮಾತನಾಡುತ್ತಾ ಬಿಗ್‍ಬಾಸ್ ಮನೆಯಲ್ಲಿ ಗೇಮ್ ಆಡುತ್ತಿದ್ದಾರೆ. ದಿವ್ಯಾ ಮಂಜು ಬಾಲ, ಹೆಚ್ಚಾಗಿ ಅವನ ಜೊತೆಗೆ ಕಾಲ ಕಳೆಯುತ್ತಾಳೆ ಎಂದು ದಿವ್ಯಾ ಕುರಿತಾಗಿ ಇರುವ ಕೆಲವು ದೂರುಗಳು ಈ ಸೀಸನ್‍ನಲ್ಲಿ ದೂರವಾಗಿದೆ. ಶಮಂತ್ ಕೂಡಾ ಸೇಫ್ ಗೇಮ್ ಆಡುತ್ತಿದ್ದಾರೆ, ಸಂಬರಗಿ, ಚಕ್ರವರ್ತಿ ಜೊತೆಗೆ ಕಾಲಕಳೆಯುತ್ತಾರೆ ಎನ್ನುವ ಮಾತಿತ್ತು. ಆದರೆ ಇದೀಗ ಶಮಂತ್ ಪ್ರತಿನಿತ್ಯ ಹಾಡು, ಜೋಕ್, ಗೇಮ್ ಮಾಡುತ್ತಾ ತಮ್ಮದೇ ಆಗಿರುವ ರೀತಿಯಲ್ಲಿ ಮನರಂಜನೆ ನೀಡಿತ್ತಾ ಬಿಗ್‍ಬಾಸ್ ವೀಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...