ದಿ. ಜಯಲಲಿತಾ ಚಿನ್ನಾಭರಣ ಹಿಂತಿರುಗಿಸಲು ದಿನಾಂಕ ನಿಗದಿ ಪಡಿಸಿದ ಕರ್ನಾಟಕ ಕೋರ್ಟ್

Date:

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್‌, ಜಪ್ತಿಯಾದ ಜಯಲಲಿತಾ ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲು ಸೂಚನೆ ನೀಡಿದೆ.ಮಾರ್ಚ್ 6 ಮತ್ತು 7 ರಂದು ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ‌ ಹಸ್ತಾಂತರಿಸಬೇಕು ಎಂದು ನ್ಯಾ. ಮೋಹನ್‌ ಸೂಚಿಸಿದ್ದಾರೆ.
ಒಡವೆ ಸ್ವೀಕರಿಸಲು ತಮಿಳುನಾಡಿನಿಂದ ಇಬ್ಬರು ಅಧಿಕಾರಿಗಳ ನೇಮಕವಾಗಬೇಕು. ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ಹೈಕೋರ್ಟ್‌ ಸೂಚಿಸಿದೆ. ಕರ್ನಾಟಕಕ್ಕೆ ಕೊಡಬೇಕಾದ‌ 5 ಕೋಟಿ ರೂ. ವ್ಯಾಜ್ಯ ಶುಲ್ಕ ಇನ್ನೂ ಪಾವತಿಯಾಗಿಲ್ಲ ಎಂದು ಕೋರ್ಟ್‌ಗೆ ಎಸ್‌ಪಿಪಿ ಕಿರಣ್ ಜವಳಿ ಮಾಹಿತಿ ನೀಡಿದರು. ಮುಂದಿನ‌ ವಿಚಾರಣೆಯನ್ನು ಹೈಕೋರ್ಟ್‌ ಮಾ.6 ಕ್ಕೆ ನಿಗದಿಪಡಿಸಿದೆ.

Share post:

Subscribe

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...