ದೀಪಾವಳಿ ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಮತ್ತು ಸಂತೋಷದಿಂದ ಆಚರಿಸುವ ಬಹುಮುಖ್ಯ ಹಬ್ಬಗಳಲ್ಲಿ ಒಂದು. ಜನಸಾಮಾನ್ಯರಂತೆಯೇ ಸೆಲೆಬ್ರಿಟಿಗಳು ಸಹ ದೀಪಾವಳಿ ಹಬ್ಬವನ್ನು ತುಂಬಾ ಸಂತೋಷದಿಂದ ಆಚರಣೆ ಮಾಡುತ್ತಾರೆ ಮತ್ತು ತಮ್ಮ ಸಂಭ್ರಮಾಚರಣೆಯ ಫೋಟೋ ಮತ್ತು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ. ಹೀಗೆ ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ತಮ್ಮ ಪತ್ನಿ ಸಾಗರಿಕ ಅವರ ಜೊತೆ ತಮ್ಮ ಮನೆಯಲ್ಲಿ ದೀಪಾವಳಿ ಸಂಭ್ರಮ ಆಚರಣೆಯನ್ನು ಮಾಡಿದ್ದಾರೆ.
ಇನ್ನು ಜಹೀರ್ ಅವರ ಪತ್ನಿ ಸಾಗರಿಕಾ ಅವರು ಪೂಜೆಯ ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ ಇಬ್ಬರು ಸಹ ಹಿಂದೂ ಉಡುಗೆಗಳನ್ನು ತೊಟ್ಟು ದೇವರಿಗೆ ಪೂಜೆ ಸಲ್ಲಿಸುವಂತಹ ಫೋಟೊ ಇದಾಗಿದೆ. ಇನ್ನು ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಸ್ಲಿಂ ಆಗಿ ಒಂದು ಹಿಂದೂ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಸೂಪರ್ ಎಂದು ಕೆಲವರು ಅಭಿಪ್ರಾಯ ಪಟ್ಟರೆ , ಇನ್ನು ಕೆಲವರು ಓಹೋ ಏನು ಪೂಜೆ ಬೇರೆ ಶುರು ಮಾಡಿಬಿಟ್ಟಿದ್ದೀರಾ ಎಂದು ಜಹೀರ್ ಅವರ ಕಾಲನ್ನು ಎಳೆದಿದ್ದಾರೆ.