ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದ “ಧನಂಜಯ್”: ಬಾಳಸಂಗಾತಿ ಪರಿಚಯಿಸಿದ “ಡಾಲಿ”

Date:

ದೀಪಾವಳಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದ “ಧನಂಜಯ್”: ಬಾಳಸಂಗಾತಿ ಪರಿಚಯಿಸಿದ “ಡಾಲಿ”

ಡಾಲಿ ಧನಂಜಯ್ ಮದುವೆ ವಿಚಾರ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಡಾಲಿ ಈ ಬಗ್ಗೆ ಅಷ್ಟೇನು ತಲೆ ಕೆಡೆಸಿಕೊಂಡಿರಲಿಲ್ಲ. ಆಗುವ ಸಮಯ ಬಂದಾಗ ಆಗೋದು ಎಂದು ಹೇಳುತ್ತಾ ಬಂದಿದ್ದಾರೆ. ಆದರೀಗ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ. ಹೌದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋ ಹಂಚಿಕೊಳ್ಳುವ ಮೂಲಕ ಧನಂದಯ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಡಾಲಿ ಯಾರನ್ನು ಮುದುವೆಯಾಗುತ್ತಾರೆ, ಚಿತ್ರರಂಗದವರಾ ಅಥವಾ ಬೇರೆ ಕ್ಷೇತ್ರದವರನ್ನು ಮದುವೆಯಾಗುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಇದೀಗ ಆ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಧನಂಜಯ ವೈದ್ಯೆಯನ್ನು ಕೈ ಹಿಡಿಯುತ್ತಿದ್ದಾರೆ. ಹೌದು ಡಾಲಿ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಧನ್ಯತಾ. ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಅನ್ನು ಕೈ ಹಿಡುಯುತ್ತಿದ್ದಾರೆ.
ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ, ಓದಿದ್ದು ಮೈಸೂರಿನಲ್ಲಿ. ಅರಸಿಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿ. ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಸುಂದರವಾಗಿ ಕಂಗೊಳಿಸುತ್ತಿದ್ದಾರೆ. ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ ಧನಂಜಯ. ಧನ್ಯತಾ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಇಬ್ಬರ ಮುದ್ದಾದ ವಿಡಿಯೋಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯ ಹರಿದುಬರುತ್ತಿದೆ.
ಅಂದಹಾಗೆ ಇಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ. ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ಮದುವೆ ನಡೆಯಲಿದೆ. ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ. ಸದ್ಯ ಗುಡ್ ನ್ಯೂಸ್ ನೀಡಿರುವ ಧನಂಜಯ ಅವರಿಗೆ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.

Share post:

Subscribe

spot_imgspot_img

Popular

More like this
Related

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ ಬೆಂಗಳೂರು:...

ವಿದೇಶಿಗರಿಗೆ ವೀಸಾ ವಿಸ್ತರಣೆ ಹಕ್ಕು ಇಲ್ಲ: ಹೈಕೋರ್ಟ್ ಸ್ಪಷ್ಟನೆ

ವಿದೇಶಿಗರಿಗೆ ವೀಸಾ ವಿಸ್ತರಣೆ ಹಕ್ಕು ಇಲ್ಲ: ಹೈಕೋರ್ಟ್ ಸ್ಪಷ್ಟನೆ ಬೆಂಗಳೂರು: ವಿದೇಶಗಳಿಂದ ಭಾರತಕ್ಕೆ...

ಸಿ.ಜೆ. ರಾಯ್ ಸಾವು: ಉನ್ನತ ಮಟ್ಟದ ತನಿಖೆ – ಡಿ.ಕೆ. ಶಿವಕುಮಾರ್ ಭರವಸೆ

ಸಿ.ಜೆ. ರಾಯ್ ಸಾವು: ಉನ್ನತ ಮಟ್ಟದ ತನಿಖೆ – ಡಿ.ಕೆ. ಶಿವಕುಮಾರ್...

ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ

ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ ಬೆಂಗಳೂರು:...