ದೀಪಿಕಾಗೆ ಕೊರೊನಾ!

Date:

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ತಂದೆಗೆ ಕೊರೊನಾ ಕಾಣಿಸಿಕೊಂಡಿರು ಬೆನ್ನಲ್ಲೆ ದೀಪಿಕಾ ಅವರಿಗೂ ಸೋಂಕು ದೃಢವಾಗಿದೆ. ದೀಪಿಕಾ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಲಾಕ್‍ಡೌನ್ ಪ್ರಾರಂಭವಾಗುವ ಮೊದಲೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಕಳೆದ ತಿಂಗಳು ಬೆಂಗಳೂರಿಗೆ ಬಂದಿದ್ದಾರೆ.

 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕುಟುಂಬದ ಎಲ್ಲರಿಗೂ ಕೊರೊನಾ ವಕ್ಕರಿಸಿದ್ದು, ತಂದೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಪ್ರಕಾಶ್ ಪಡುಕೋಣೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ವಾರ ಕಳೆದರೂ ಜ್ವರ ಕಡಿಮೆ ಆಗದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಲಾಗಿದ್ದು ಈ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕಾಶ್ ಪಡುಕೋಣೆ ಅವರ ಪತ್ನಿ ಉಜ್ವಲ ಹಾಗೂ ಎರಡನೇ ಪುತ್ರಿಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಅವರು ಮನೆಯಲ್ಲೇ ಐಸೋಲೆಟ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

 

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...