ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ನೀರಜ್ ಚೋಪ್ರಾ ಜಾವೆಲಿನ್!

1
67

ನವದೆಹಲಿ: ಕಳೆದ ಸೆಪ್ಟೆಂಬರ್ 17ರಂದು ಆರಂಭವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ – ಹರಾಜಿಗೆ ಅಕ್ಟೋಬರ್ 7ರಂದು ತೆರೆ ಬಿದ್ದಿದೆ. ಈ ಹರಾಜಿನಲ್ಲಿ ಸರ್ದಾರ್ ಪಟೇಲ್ ಅವರ ಶಿಲ್ಪಕಲೆಗೆ ಅತಿಹೆಚ್ಚು ಬಿಡ್‌ಗಳು ನಡೆದಿವೆ ಮತ್ತು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿದೆ.

 

ಸರ್ದಾರ್ ಪಟೇಲ್ ಶಿಲ್ಪಕಲೆಯು 140 ಬಿಡ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ – ಹರಾಜಿನಲ್ಲಿ ಅತಿ ಹೆಚ್ಚು ಬಿಡ್‌ಗಳನ್ನು ಪಡೆದುಕೊಂಡ ಉಡುಗೊರೆ ಎನಿಸಿಕೊಂಡರೆ, ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಜಾವೆಲಿನ್ ಬರೋಬ್ಬರಿ 1.5 ಕೋಟಿ ರೂ. ಗೆ ಹರಾಜಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ – ಹರಾಜಿನಲ್ಲಿ ಸುಮಾರು 1348 ಉಡುಗೊರೆಗಳ ಹರಾಜನ್ನು ನಡೆಸಲಾಯಿತು. ಇದರಲ್ಲಿ ಮರದ ಗಣೇಶನ ಪ್ರತಿಮೆ 117 ಬಿಡ್‌ಗಳು, ಪುಣೆ ಮೆಟ್ರೋ ಮಾರ್ಗದ ನೆನಪಿನ ಕಾಣಿಕೆ 104 ಬಿಡ್‌ಗಳು ಮತ್ತು ವಿಜಯ ಜ್ವಾಲೆಯ ಸ್ಮರಣಿಕೆ 98 ಬಿಡ್‌ಗಳನ್ನು ಪಡೆದುಕೊಂಡವು.

ಇನ್ನು ಇತ್ತೀಚೆಗಷ್ಟೇ ನಡೆದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಸಾಧನೆ ಮಾಡಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ – ಹರಾಜಿನಲ್ಲಿ 1.5 ಕೋಟಿಗೆ ಹರಾಜಾಗುವ ಮೂಲಕ ಅತಿ ದೊಡ್ಡ ಮೊತ್ತಕ್ಕೆ ಹರಾಜಾದ ಉಡುಗೊರೆ ಎನಿಸಿಕೊಂಡಿದೆ. ಉಳಿದಂತೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಸಹಿ ಮಾಡಿದ್ದ ಅಂಗವಸ್ತ್ರವು 1 ಕೋಟಿ, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಕ್ಸರ್ ಲವ್ಲಿನಾ ಬೊರ್ಗಹೈನ್ ಅವರ ಕೈಗವಸುಗಳು 91 ಲಕ್ಷ ಮತ್ತು ಸುಮಿತ್ ಅಂಟಿಲ್ ಅವರ ಜಾವೆಲಿನ್ 1.2 ಕೋಟಿಗೆ ಹರಾಜಾದವು.

 

1 COMMENT

LEAVE A REPLY

Please enter your comment!
Please enter your name here