ಭಾರತೀಯ ತಂಡದಲ್ಲಿ ಕೋವಿಡ್-19 ಪ್ರಕರಣ ಕಾಣಿಸಿಕೊಂಡಿದ್ದರಿಂದ ಭಾರತ-ಶ್ರೀಲಂಕಾ ಟಿ20ಐ ಸರಣಿಗೆ ತೊಂದರೆಯಾಗುವ ಭೀತಿ ಎದುರಾಗಿತ್ತು. ಆದರೆ ಇತ್ತಂಡಗಳ ದ್ವಿತೀಯ ಪಂದ್ಯ ಮುಂದು ದಿನ ಮುಂದೂಡಲ್ಪಟ್ಟು ಶುರುವಾಗುತ್ತಿದೆ. ಜುಲೈ 28ರಂದು ದ್ವಿತೀಯ ಟಿ20ಐ ಪಂದ್ಯ ನಡೆಯುತ್ತಿದೆ.

ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ದ್ವಿತೀಯ ಟಿ20ಐ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಟ್ಟು ನಾಲ್ವರು ಪಾದಾರ್ಪಣೆ ಪಂದ್ಯ ಮಾಡಿದ್ದಾರೆ. ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ಚೇತನ್ ಸಕಾರಿಯಾ ಒಂದು ಟಿ20ಐ ಪಾದಾರ್ಪಣೆ ಪಂದ್ಯ ಆಡುತ್ತಿದ್ದಾರೆ. ಭಾರತ ತಂಡದಲ್ಲಿ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ ಸೋಂಕು ಪಾಸಿಟಿವ್ ಬಂದಿತ್ತು. ಹೀಗಾಗಿ ತಂಡದ ಇನ್ನೊಂದಿಷ್ಟು ಜನ ಕೂಡ ಕ್ವಾರಂಟೈನ್ ಪಾಲಿಸಿಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಆದ್ದರಿಂದ ಯುವ ಆಟಗಾರರ ಪಾದಾರ್ಪಣೆಗೆ ದಾರಿಯಾಗಿದೆ.

ಭಾರತ ಪ್ಲೇಯಿಂಗ್ XI
ಶಿಖರ್ ಧವನ್ (ಸಿ), ಋತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರಾಹುಲ್ ಚಾಹರ್, ನವದೀಪ್ ಸೈನಿ, ಚೇತನ್ ಸಕರಿಯಾ, ವರುಣ್ ಚಕ್ರವರ್ತಿ.






