ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತೀರ್ಥಹಳ್ಳಿಯ ಹೀರೋ ದೂದ್ಪೇಡ ದಿಗಂತ್. ಸ್ಯಾಂಡಲ್ವುಡ್ನ ಜನಪ್ರಿಯ ನಟರಲ್ಲಿ ಒಬ್ಬರು. ಬಹುಕಾಲದ ಗೆಳತಿ ಐಂದ್ರಿತಾ ರೈ ಜೊತೆ ಇತ್ತೀಚೆಗೆ ಹೊಸ ಜೀವನ ಆರಂಭಿಸಿರುವ ದಿಗಂತ್ ಸದ್ಯ ಯಾವದೇ ಸಿನಿಮಾದಲ್ಲಿ ಬ್ಯುಸಿ ಇರಲಿಲ್ಲ.
ಆದರೆ, ಈಗ ತೆಲುಗು ಸಿನಿರಂಗಕ್ಕೆ ಕಮ್ ಬ್ಯಾಕ್ ಆಗಲು ಹೊರಟಿದ್ದಾರೆ. 2008ರಲ್ಲಿ ರಿಲೀಸ್ ಆಗಿದ್ದ ಮುಂಗಾರು ಮಳೆ ತೆಲುಗು ರಿಮೇಕ್ ವಾನ ಬಳಿಕ ದಿಗ್ಗಿ ತೆಲುಗಿನಲ್ಲಿ ನಟಿಸಿರಲಿಲ್ಲ. ಅದೊಂದು ಟಾಲಿವುಡ್ ಚಿತ್ರದಲ್ಲಿ ತೀರ್ಥಹಳ್ಳಿಯ ಚೆಲುವ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಈಗ ಅವರು ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ.
ಕನ್ನಡತಿ ರಶ್ಮಿಕಾಗೆ ನಾಯಕನಾಗಿ ಗೀತಾಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದ್ದ ದೇವರಕೊಂಡ ಅವರ ಹೀರೋ ಚಿತ್ರದಲ್ಲಿ ದಿಗ್ಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಬೈಕ್ರೇಸ್ನಲ್ಲಿ ದಿಗಂತ್ ದೇವರಕೊಂಡ ಜೊತೆಗೆ ಕಾಣಿಸಿಕೊಂಡಿದ್ದಾರೆ.
ಮೇ ತಿಂಗಳಿನಿಂದ ಹಿರೋ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಈ ತಿಂಗಳ ಮಧ್ಯಭಾಗದಲ್ಲಿ ರೇಸ್ ಟ್ರಕ್ ಚಿತ್ರೀಕರಣ ದೆಹಲಿಯಲ್ಲಿ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಆದರೆ , ದಿಗಂತ್ ಪಾತ್ರದ ಬಗ್ಗೆ ಪ್ರೊಢಕ್ಷನ್ ಹೌಸ್ ಅಧಿಕೃತವಾಗಿ ಇನ್ನೂ ಯಾವ ವಿಷಯವನ್ನೂ ಹೇಳಿಲ್ಲ.
ದೇವರಕೊಂಡ ಜೊತೆ ದೂದ್ಪೇಡ ದಿಗಂತ್..!
Date: