ಲೋಕಸಭಾ ಚುನಾವಣೆ ಬಳಿಕ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಪರಮೇಶ್ವರ್ ವಿರುದ್ದ ಮಾಡಿರುವ ಟೀಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು, ಪರಮೇಶ್ವರ್ 50 ವರ್ಷಗಳಿಂದ ಸ್ನೇಹಿತರು. ನಮ್ಮಿಬ್ಬರ ನಡುವಿನ ಜಗಳ ಹೊಸದೇನಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿನ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ರಾಜಣ್ಣ, ಯಾಕೆ ದೇವೇಗೌಡರ ಸೋಲನ್ನೇ ಹೈಪ್ ಮಾಡಲಾಗುತ್ತಿದೆ. ಅವರೇನು ಆಕಾಶದಿಂದ ಇಳಿದು ಬಂದಿದ್ದರಾ ಎಂದು ಪ್ರಶ್ನಿಸಿದರಲ್ಲದೇ ಈ ಚುನಾವಣೆಯಲ್ಲಿ ಸೋಲನುಭವಿಸಿದ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ನಾಯಕರಲ್ಲವೇ ಎಂದು ಕೇಳಿದ್ದಾರೆ.