ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವೇಗೌಡರ ಮಗ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಮತ್ತೊಬ್ಬ ಮಗ ಸಚಿವ, ಸೊಸೆ ಪಂಚಾಯಿತಿ ಸೊತೆ, ಈಗ ಮೊಮ್ಮಕ್ಕಳಾದ ನಿಖಿಲ್,ಪ್ರಜ್ವಲ್ ಅವರನ್ನೂ ಲೋಕಸಭೆ ಕಣಕ್ಕಿಳಿದಿದ್ದಾರೆ, ಈಗ ಉಳಿದಿದ್ದು, ದೇವೇಗೌಡರ ಪತ್ನಿಯೊಬ್ಬರೇ, ಅವರಿಗೂ ಟಿಕೆಟ್ ನೀಡಿ, ಚುನಾವಣೆಗೆ ನಿಲ್ಲಿಸಿದರೆ ಕೋಟಾ ಭರ್ತಿಯಾಗುತ್ತಿತ್ತು ಎಂದು ವ್ಯಂಗ್ಯವಾಡಿದರು.
ಹೆಚ್.ಡಿ. ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಇಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಎಲ್ಲಾ ದೇವೇಗೌಡರ ಕುಟುಂಬಸ್ಥರೇ ತುಂಬಿಕೊಂಡಿದ್ದಾರೆ ಎಂದು ಕಿಡಿಕಾರಿದರು.