ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ಗಂಗಾ ಸನ್ನಿಧಿ ವಾರಣಾಸಿಯಿಂದ ಕಣಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಹನ್ನೆರಡು ಗಂಟೆ ಸುಮಾರಿಗೆ ತಮ್ಮ ನಾಮಪತ್ರವನ್ನು ಡಿಸಿ ಕಚೇರಿಯಲ್ಲಿ ಸಲ್ಲಿಸಿದ್ದಾರೆ.
ಮೋದಿ ಸಲ್ಲಿಸಿದ ನಾಮಪತ್ರದಲ್ಲಿ ಅನೇಕ ಕುತೂಹಲಕಾರಿ ವಿಷಯಗಳು ಅಡಗಿದ್ದು ಅದರಲ್ಲಿ ಅವರ ಆಸ್ತಿ ಮೌಲ್ಯ ಒಂದಾಗಿದೆ.
ಈ ಬಾರಿ ಸಲ್ಲಿಸಿರುವ ನಾಮಪತ್ರದಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಹೊಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿಕೊಂಡಿದ್ದಾರೆ.
ಕಳೆದ ಬಾರಿಯ ನಾಮಪತ್ರ ಸಲ್ಲಿಕೆಯ ವೇಳೆ ಘೋಷಿಸಿಕೊಂಡಿದ್ದ ಆಸ್ತಿಗಿಂತ ಈ ಬಾರಿ 86 ಲಕ್ಷ ರೂಪಾಯಿ ಆಸ್ತಿ ಮೌಲ್ಯ ಏರಿಕೆ ಆಗಿರುವುದನ್ನು ನಾವಿಲ್ಲಿ ಕಾಣಬಹುದು.
2014 ರಲ್ಲಿ ಪ್ರಧಾನಿ ಆಗುವುದಕ್ಕೆ ಮುಂಚೆ ಮೋದಿ ಬಳಿ ಇದ್ದ ಆಸ್ತಿ ಎಷ್ಟು ಎಂಬುದನ್ನು ನೋಡುವುದಾದರೆ..
1.65 ಕೋಟಿ ರೂಪಾಯಿ ಆಸ್ತಿ..
29 ಸಾವಿರ ರೂಪಾಯಿ ನಗದು..
44.23 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ..
4.34 ಲಕ್ಷ ರೂಪಾಯಿ ಉಳಿತಾಯ ಬಾಂಡ್ ಗಳು..
1.35 ಲಕ್ಷದ ಆಭರಣಗಳು..
51.57 ಲಕ್ಷದ ಚಿರಾಸ್ತಿ..
1 ಕೋಟಿ ರೂಪಾಯಿ ಮೌಲ್ಯದ ಕಟ್ಟಡ, ಇದಿಷ್ಟನ್ನು ಮೋದಿ ಪ್ರಧಾನಿ ಆಗುವುದಕ್ಕೆ ಮುಂಚೆ ಅಂದರೆ 2014 ರಲ್ಲಿ ಹೊಂದಿದ್ದರು.
ಇನ್ನು 2019 ರಲ್ಲಿ ಮೋದಿ ಬಳಿ ಇರುವ ಆಸ್ತಿ ಎಷ್ಟು ಎನ್ನುವುದನ್ನು ನೋಡುವುದಾದರೆ..
2.51 ಕೋಟಿ ಮೌಲ್ಯದ ಆಸ್ತಿ..
1.1 ಕೋಟಿ ಮೌಲ್ಯದ ಸ್ಥಿರಾಸ್ತಿ..
1.41 ಕೋಟಿ ಮೌಲ್ಯದ ಚರಾಸ್ತಿ..
19.92 ಲಕ್ಷ ರೂಪಾಯಿ ವಾರ್ಷಿಕ ಆದಾಯ..
ಸರ್ಕಾರ ಕೊಡುವ ವೇತನ ಬ್ಯಾಂಕಿನ ಬಡ್ಡಿ ಹಣ ಆದಾಯದ ಮೂಲ..
38,750 ಸಾವಿರ ರೂಪಾಯಿ ಕೈಯಲ್ಲಿರುವ ನಗದು..
4,144 ಬ್ಯಾಂಕಿನಲ್ಲಿರುವ ಹಣ..
1,27,81,574 ಕೋಟಿ ಇನ್ಸೂರೆನ್ಸ್ ಮತ್ತು ಎಂ ಎಸ್ ಸಿ..
1,13,800 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರ..
2,26,040 ಲಕ್ಷ ರೂಪಾಯಿ ಇತರೆ ಆಸ್ತಿ..
ಇದರ ಜೊತೆಗೆ ಗುಜರಾತಿನ ಗಾಂಧಿನಗರದಲ್ಲಿರುವ ಮನೆಯಲ್ಲಿ ಮೋದಿ 25% ಹಕ್ಕನ್ನು ಹೊಂದಿದ್ದಾರೆ.
ಅಧಿಕಾರ ಕೈಯಲ್ಲಿ ಇದ್ದರೂ ಸಹ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರು ಸಹ ನರೇಂದ್ರ ಮೋದಿ ಅವರ ಬಳಿ ಯಾವುದೇ ಮನೆ ಮತ್ತು ಜಮೀನು ಇಲ್ಲದೆ ಇರುವುದನ್ನು ನಾವಿಲ್ಲಿ ಗಮನಿಸಬಹುದು ಅಲ್ಲದೆ ಮೋದಿ ಅವರ ಆದಾಯದ ಮೂಲ ವೇತನ ಮತ್ತು ಬ್ಯಾಂಕ್ ಬಡ್ಡಿ ಆಗಿರುವುದು ಆಶ್ಚರ್ಯಕರ ಅಲ್ಲದೆ ಮೋದಿ ಯಾವುದೇ ಸಾಲ ಮಾಡಿಲ್ಲ, ಕ್ರಿಮಿನಲ್ ಕೇಸ್ ಇಲ್ಲ.