ಕಾವಿ ಬಟ್ಟೆ ಹಾಕಿಕೊಂಡು, ಗಡ್ಡ ಬಿಟ್ಟುಕೊಂಡು ಶೋಕಿ ಮಾಡುವುದಲ್ಲಪ್ಪ ರಾಜಕೀಯ. ಈ ದೇಶದ ಮಣ್ಣನ್ನು ವಿದೇಶಗಳಿಗೆ ಮಾರಿರುವ ನಿನಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಶ್ರೀರಾಮಲು ಅವರಿಗೆ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ನಮ್ಮ ಕುಟುಂಬ ಭಾವನಾತ್ಮಕವಾಗಿದ್ದು, ಬಡವರ ಸಂಕಷ್ಟ ನೋಡಿದರೆ ನಮಗೆ ಕಣ್ಣೀರು ಬರುತ್ತದೆ ಎಂದು ಹೇಳಿದ ಕುಮಾರಸ್ವಾಮಿಯವರು, ಡಿಸೆಂಬರ್ 9ರಂದು ಉಪ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯ ರಾಜಕಾರಣ ಶುದ್ಧವಾಗುತ್ತದೆ ಎಂದು ಹೇಳಿದ್ದಾರೆ.