ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ!!

Date:

ದೇಶದಲ್ಲಿಯೇ ಮೊದಲ ಬಾರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದ ಕೇರಳದ ತ್ರಿಶ್ಶೂರು ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಮತ್ತೊಮ್ಮೆ ಕೋವಿಡ್ 19 ಕಾಣಿಸಿಕೊಂಡಿದೆ
ಚೀನಾದ ವುಹಾನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿರುವ 20 ವರ್ಷದ ಯುವತಿಯು ದಿಲ್ಲಿ ವಿಮಾನವೇರುವ ಮುನ್ನ ನಡೆಸಲಾದ ಮಾಮೂಲಿ ಪರೀಕ್ಷೆ ವೇಳೆ ಎರಡನೆಯ ಬಾರಿ ವೈರಸ್ ಪತ್ತೆಯಾಗಿದೆ. ಆಕೆಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ತ್ರಿಶ್ಶೂರ್‌ನ ತನ್ನ ನಿವಾಸದಲ್ಲಿ ಆಕೆ ಪ್ರತ್ಯೇಕವಾಗಿದ್ದಾಳೆ. ಈವರೆಗೂ ಆಕೆ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಡುಂಗಲ್ಲೂರ್ ನಿವಾಸಿಯಾದ ವಿದ್ಯಾರ್ಥಿನಿಯಲ್ಲಿ 2020ರ ಜನವರಿ 30ರಲ್ಲಿ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಇದು ಇಡೀ ದೇಶದಲ್ಲಿಯೇ ಮೊದಲ ಕೊರೊನಾ ವೈರಸ್ ಪ್ರಕರಣವಾಗಿತ್ತು. ಕೊರೊನಾ ವೈರಸ್ ಮೂಲ ಕೇಂದ್ರವಾದ ವುಹಾನ್‌ನಲ್ಲಿ ಅಧ್ಯಯನ ಮಾಡುತ್ತಿದ್ದ ಆಕೆಗೆ ಅಲ್ಲಿಯೇ ಸೋಂಕು ತಗುಲಿತ್ತು.


ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಸಂದರ್ಭದಲ್ಲಿ ಆಕೆ ತ್ರಿಶ್ಶೂರಿನ ಮನೆಗೆ ಮರಳಿದ್ದಳು. ಆಕೆಯಲ್ಲಿ ವೈರಸ್ ಹಾಗೂ ಅದರ ಲಕ್ಷಣಗಳು ಪತ್ತೆಯಾದ ಬಳಿಕ ತ್ರಿಶ್ಶೂರು ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೆಲವು ದಿನಗಳ ಬಳಿಕ ಆಕೆ ಚೇತರಿಸಿಕೊಂಡಿದ್ದಳು.
ಆಕೆ  ದಿಲ್ಲಿಗೆ ಪ್ರಯಾಣಿಸಲು ಸಿದ್ಧತೆ ನಡೆಸಿದ್ದಳು. ಅದಕ್ಕೂ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದು, ಜುಲೈ 13ರಂದು ಬಂದ ಫಲಿತಾಂಶದಲ್ಲಿ ಆಕೆಯಲ್ಲಿ ವೈರಸ್ ಇರುವುದು ಪತ್ತೆಯಾಗಿದೆ. ಆಕೆ ಚೀನಾಕ್ಕೆ ಮರಳಿ ತನ್ನ ಅಧ್ಯಯನ ಮುಂದುವರಿಸಲು ಬಯಸಿದ್ದಳು. ಆಕೆಯ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ, ಆರ್‌ಟಿ-ಪಿಸಿಆರ್ ವರದಿಯಲ್ಲಿ ಪಾಸಿಟಿವ್ ಬಂದಿದೆ.
2020ರ ಜನವರಿ 23ರಂದು ಚೀನಾದಿಂದ ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ಕೇರಳಕ್ಕೆ ಮರಳಿತ್ತು. ವುಹಾನ್‌ನಲ್ಲಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಅಲ್ಲಿ ಅಧ್ಯಯನ ನಡೆಸುತ್ತಿದ್ದವರು ತವರಿಗೆ ಹಿಂದಿರುಗಿದ್ದರು. 2020ರ ಜನವರಿ 30ರಂದು ಆ ವಿದ್ಯಾರ್ಥಿನಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಆಕೆಯ ಬಳಿಕ ವುಹಾನ್‌ನಿಂದ ಬಂದಿದ್ದ ಇನ್ನೂ ಇಬ್ಬರು ವಿದ್ಯಾರ್ಥಿಗಳ ವರದಿ ಕೂಡ ಪಾಸಿಟಿವ್ ಬಂದಿತ್ತು.
ವಿದ್ಯಾರ್ಥಿನಿ ಮೊದಲು ಭಾರತಕ್ಕೆ ಬಂದಾಗ ನಡೆಸಿದ ತಪಾಸಣೆಯಲ್ಲಿ ಆಕೆಯಲ್ಲಿ ಕೋವಿಡ್ ಕಂಡುಬಂದಿರಲಿಲ್ಲ. ಆಕೆಗೆ ಸೋಂಕಿತರ ಜತೆ ನೇರ ಸಂಪರ್ಕ ಇಲ್ಲದೆ ಇದ್ದರೂ, ವುಹಾನ್‌ನಿಂದ ಕುನ್ಮಿಂಗ್‌ಗೆ ರೈಲಿನಲ್ಲಿ ಬರುವಾಗ ಸೋಂಕು ತಗುಲಿತ್ತು ಎಂದು ಊಹಿಸಲಾಗಿತ್ತು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...