ದೇಶದ ಶ್ರೀಮಂತ ಗಾಯಕ ಯಾರು ಗೊತ್ತಾ

Date:

ಭಾರತ ದೇಶದಲ್ಲಿ ನೂರಾರು ಪ್ರತಿಭಾನ್ವಿತ ಗಾಯಕರಿದ್ದಾರೆ. ಆದರೆ ಶಾಸ್ತ್ರೀಯ ಸಂಗೀತಕ್ಕೆ ಬಂದಾಗ ಸೋನು ನಿಗಮ್ ಭಾರತದಲ್ಲಿರುವ ಅತ್ಯುತ್ತಮ ಗಾಯಕ ಎಂದು ಮೊದಲಿಗರಾಗಿ ಗುರುತಿಸಿಕೊಳ್ಳುತ್ತಾರೆ. ಇವರು ಶಾಸ್ತ್ರೀಯ ಸಂಗೀತ, ರಾಕ್ ಸಂಗೀತ ಪ್ರಕಾರಗಳಲ್ಲೂ ಹಾಡಬಲ್ಲರು. ಇವರು ತಮ್ಮ ಸಂಗೀತ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸನ್ನು ಗಳಿಸಿದವರು.

ಸೋನು ನಿಗಮ್ ರವರು 1982 ರಲ್ಲಿ ಬಾಲಿವುಡ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು 1 ರಾಷ್ಟ್ರೀಯ ಪ್ರಶಸ್ತಿ, 5 ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತದಲ್ಲಿ 19 ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಕೆಲವು ಗಾಯಕರಲ್ಲಿ ಇವರು ಕೂಡಾ ಒಬ್ಬರು. ಇವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಪಡೆದ ಸಿಂಗರ್ ಕೂಡಾ ಹೌದು.

ಇವರು ‘ಮಧುರ ಕಂಠದ ದೇವರು’ ಎಂದು ಪ್ರಸಿದ್ಧರಾಗಿದ್ದಾರೆ. ಸೋನು ನಿಗಮ್ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಇವರು ತಮ್ಮ ವೃತ್ತಿಜೀವನದ ಮೂಲಕ ಭಾರೀ ಸಂಪತ್ತನ್ನು ಪಡೆದುಕೊಂಡಿದ್ದಾರೆ. ಮುಂಬೈಯಲ್ಲಿ ಇವರು ದುಬಾರಿ ಕಾರುಗಳನ್ನು ಮತ್ತು ಆಸ್ತಿಗಳನ್ನು ಹೊಂದಿದ್ದಾರೆ. ಇವರ ನಿವ್ವಳ ಮೌಲ್ಯ ಸುಮಾರು ₹ 350 ಕೋಟಿ. ವಿವಾಹಿತ ವ್ಯಕ್ತಿಯಾಗಿರುವ ಸೋನು ನಿಗಮ್ ಸರಳ ಜೀವನ ನಡೆಸುತ್ತಿದ್ದಾರೆ‌. ಉನ್ನತ ಚಿಂತನೆ ಇವರ ಯಶಸ್ಸಿನ ಗುಟ್ಟು.

ಇವರನ್ನು ಹೆಚ್ಚಿನವರು ‘ಆಧುನಿಕ ಮೊಹಮ್ಮದ್ ರಫಿ’ ಎಂದೇ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿತ್ ಸಿಂಗ್, ಅಮಿತ್ ತ್ರಿವೇದಿ ಮೊದಲಾದವರ ಮಧ್ಯೆ ಇವರು ಕಡಿಮೆ ಜನಪ್ರಿಯತೆ ಪಡೆದಿದ್ದಾರೆ ಅನ್ನುವವರು‌ ಇದ್ದಾರೆ. ಆದರೆ ‌ಈವರೆಗೂ ಸೋನು ನಿಗಮ್ ಭಾರತದ ಶ್ರೀಮಂತ ಗಾಯಕರಾಗಿಯೇ ಉಳಿದುಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...