ಆಶ್ರಮಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣ ಬೆಳಕಿಗೆ ಬಂದ ನಂತರ ಸ್ವಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಓಡಿ ಹೊಗಿದ್ದಾನೆ ಆತನ ವಿರುದ್ಧ ಸಾಕ್ಷಿ ಸಂಗ್ರಹಿಸಲು ಗುಜರಾತ್ ಪೊಲೀಸರು ಸತತ ಪ್ರಯತ್ನ ಮುಂದುವರೆಸಿದ್ದಾರೆ.
ಈಗಾಗಲೇ ನಿತ್ಯಾನಂದನ ಇಬ್ಬರು ಶಿಷ್ಯರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತಮ್ಮ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ಹಣ ಸಂಗ್ರಹಿಸಲು ಇಬ್ಬರು ಮಕ್ಕಳನ್ನು ಅಪಹರಿಸಿ ಬಂಧಿಸಿಟ್ಟ ಆರೋಪದ ಮೇಲೆ ಈಗಾಗಲೇ ನಿತ್ಯಾನಂದನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.