ದೊಡ್ಮನೆಯಲ್ಲಿ ಮತ್ತೊಂದು ಮದ್ವೆ ಸಂಭ್ರಮ. ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಮೊಮ್ಮಗ , ನಟ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವ ರಾಜ್ ಕುಮಾರ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.
ಯುವರಾಜ್ ಕುಮಾರ್ ಅವರ ನಿಶ್ಚಿತಾರ್ಥ ಗುರುವಾರ ನಡೆಯಲಿದೆ. ಮೈಸೂರಿನ ಹೋಟೆಲ್ ವೊಂದರಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಮತ್ತು ಸಂಬಂಧಿಕರು, ಆಪ್ತರು ಸಾಕ್ಷಿಯಾಗಲಿದ್ದಾರೆ.
ಯುವ ಅವರು ಮದ್ವೆ ಆಗುತ್ತಿರುವುದು ಬಹುಕಾಲದ ಗೆಳತಿ ಶ್ರೀದೇವಿ ಭೈರಪ್ಪ ಅವರನ್ನು.
ಗುರು ರಾಜ್ ಕುಮಾರ್ ಎಂಬುದು ಯುವ ಅವರ ಮೊದಲ ಹೆಸರು. ಈಗ ಇವರು ಯುವ ರಾಜ್ ಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.