ನನ್ನ ಸರ್ಕಾರ ಎಲ್ಲಿ ಎಡವುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಹಳ್ಳಿ ಜನರ ಜೊತೆ ಬೆರೆಯದಿದ್ದರೆ ಸರ್ಕಾರ ಯಶಸ್ಸು ಗಳಿಸುವುದಿಲ್ಲ. ಸ್ಥಳದಲ್ಲಿಯೇ ಜನರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಯಶಸ್ಸು ಗಳಿಸಲು ಆಗಲ್ಲ, ಹಾಗಾಗಿ, ರಾತ್ರಿ ಗ್ರಾಮ ವಾಸ್ತವ್ಯ ಮಾಡದಿದ್ದರೂ ಪರವಾಗಿಲ್ಲ ಬೆಳಿಗ್ಗೆಯಿಂದ ಸಂಜೆಯವರೆಗೆ ಅವರ ಜೊತೆಗೆ ಇದ್ದರೆ ಸಾಕು ಎಂದು ಸಿಎಂ ಹೇಳಿದ್ದಾರೆ.
6-7 ತಿಂಗಳು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಿ. ನಾನು ಮಾಡುತ್ತಿರುವ ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ತಲುಪಬೇಕು ಎಂದರೆ ಅವಕಾಶ ಕೊಡಿ. ಇಂತಹ ಮುಖ್ಯಮಂತ್ರಿಯನ್ನು ನಾವು ಎಂದೂ ನೋಡಿಲ್ಲ ಎಂದು ದಾಖಲೆ ನಿರ್ಮಿಸುವುದು ನನ್ನ ಕನಸಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಯಾವುದಾದರೂ ಪಕ್ಷದವರು ಪಕ್ಷ ಪ್ರಧಾನಿ ಬಗ್ಗೆ ಮಾತನಾಡಿದರೆ ಬೆದರಿಕೆ ಹಾಕಲಾಗುತ್ತಿದೆ. ಐಟಿ, ಇಡಿ ಅಸ್ತ್ರ ಬಳಸಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಬುರುಡೆ ಬಿಡುವ ವ್ಯಕ್ತಿ ಎಂದರೆ ಅದು ಪ್ರಧಾನಿ ಮೋದಿಯಾಗಿದ್ದಾರೆ. ಬೇಟಿ ಬಚಾವೋ ಅಂತ ಮನ್ ಕಿ ಬಾತ್ ನಲ್ಲಿ ಹೇಳುತ್ತಾರೆ ಎಲ್ಲಿ ಬೇಟಿ ಬಚಾವ್ ಮಾಡಿದ್ದಾರೆಯೋ ಗೊತ್ತಿಲ್ಲ ಎಂದು ಸಿಎಂ ಟೀಕಿಸಿದ್ದಾರೆ.