No menu items!
14.2 C
Munich
Friday, May 22, 2026

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

Must read

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಶುಕ್ರವಾರ ಬೆಳಿಗ್ಗೆ ಸುಮಾರು 7.49ರ ಸಮಯದಲ್ಲಿ ನಗರದ ಹಲವು ಭಾಗಗಳಲ್ಲಿ ಭೂಮಿ ನಡುಗಿದಂತ ಅನುಭವ ಆಯಿತು.

ಗಣೇಶನಗರ, ಇಬ್ರಾಹಿಂಪುರ ಬಡಾವಣೆ, ಗಡಗಿ ಲೇಔಟ್, ವಜ್ರ ಹನುಮಾನ್ ನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಜೋರಾದ ಸದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಕಂಪನದ ಕುರಿತು ಮಾಹಿತಿ ನೀಡುವ ಆ್ಯಪ್‌ನಲ್ಲೂ ತೀವ್ರತೆ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿರುವ ಸಾಧ್ಯತೆ ಇದೆ

ಆಕಸ್ಮಿಕ ಕಂಪನದಿಂದ ಜನರಲ್ಲಿ ಆತಂಕ ನಿರ್ಮಾಣವಾಗಿದ್ದು, ಅನೇಕರು ಮನೆಗಳಿಂದ ಹೊರಗೆ ಬಂದು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು. ಕಳೆದ ಎರಡು ತಿಂಗಳಲ್ಲಿ ಈಗಾಗಲೇ 13 ಬಾರಿ ಭೂಕಂಪನ ಅನುಭವಿಸಿರುವ ವಿಜಯಪುರದ ಜನತೆ ಈಗ ಗಂಭೀರ ಚಿಂತೆಗೆ ಒಳಗಾಗಿದ್ದಾರೆ.

- Advertisement -spot_img

More articles

- Advertisement -spot_img

Latest article