ದ್ರಾವಿಡ್ ಸದಾ ಆಟಗಾರರ ನೆರವಿಗಿರುತ್ತಾರೆ : ಗೌತಮ್

Date:

ಕೊಲಂಬೋ: ಭಾರತೀಯ ಒಂದು ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ಆತಿಥೇಯರ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧವಾಗಿದ್ದರೆ, ಮತ್ತೊಂದು ತಂಡ ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಗೆ ತಯಾರಾಗಿದೆ. ಈ ಸರಣಿ ಜುಲೈ 18ರಿಂದ ಆರಂಭಗೊಳ್ಳಲಿದೆ.

ಭಾರತೀಯ ತಂಡದಲ್ಲಿ ಒಟ್ಟು 6 ಮಂದಿ ಅನ್‌ಕ್ಯಾಪ್ಟ್‌ ಆಟಗಾರರಿದ್ದಾರೆ. ಅವರಲ್ಲಿ ಆಲ್ ರೌಂಡರ್, ಕನ್ನಡಿಗ ಕೃಷ್ಣಪ್ಪ ಗೌತಮ್ ಕೂಡ ಒಬ್ಬರು. ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಅವರು ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಕೋಚ್ ಆಗಿರುವುದರಿಂದ ಗೌತಮ್, ದ್ರಾವಿಡ್ ಕೋಚಿಂಗ್ ಅಡಿಯಲ್ಲಿ ಮತ್ತೆ ಆಡಲು ಉತ್ಸುಕರಾಗಿದ್ದಾರೆ.

ರಾಹುಲ್ ದ್ರಾವಿಡ್ ಭಾರತ ‘ಎ’ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾಗ ತಂಡದಲ್ಲಿ ಕೃಷ್ಣಪ್ಪ ಕೂಡ ಇದ್ದಿದ್ದರಿಂದ ಮತ್ತು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಸದ್ಯ ಮುಖ್ಯಸ್ಥರಾಗಿರುವ ದ್ರಾವಿಡ್ ಅವರಲ್ಲಿ ಆಗೀಗ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸವಿರುವುದರಿಂದ ಗೌತಮ್ ಅವರು ದ್ರಾವಿಡ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ರಾಹುಲ್ (ದ್ರಾವಿಡ್) ಸರ್ ನನ್ನ ಭಾರತ ‘ಎ’ ತಂಡದ ಕೋಚ್. ಮತ್ತೆ ದ್ರಾವಿಡ್ ಸರ್ ಅಡಿಯಲ್ಲಿ ಆಡಲು ನಾನು ಉತ್ಸುಕನಾಗಿದ್ದೇನೆ. ಭಾರತ ‘ಎ’ ತಂಡದಲ್ಲಿ ಆಡುತ್ತಿದ್ದಾಗ ನನಗೆ ಯಾವಾಗೆಲ್ಲಾ ಕ್ರಿಕೆಟ್‌ ಬಗ್ಗೆ ಅನುಮಾನಗಳು ಮೂಡುತ್ತವೆಯೋ ಆಗೆಲ್ಲ ನಾನು ದ್ರಾವಿಡ್ ಸರ್ ಬಳಿಗೆ ಹೋಗುತ್ತಿದ್ದೆ. ರಾಹುಲ್ ಸಾರ್ ಪ್ರತೀ ವಿಚಾರಕ್ಕೂ ಓಪನ್ ಆಗಿರುತ್ತಾರೆ. ಎಲ್ಲದಕ್ಕೂ ಅವರಲ್ಲಿ ಉತ್ತರಗಳಿರುತ್ತವೆ, ಪರಿಹಾರಗಳಿರುತ್ತವೆ. ಭಾರತ ಎ ತಂಡದಲ್ಲಿ ಮಾತ್ರ ಅಲ್ಲ ಎನ್‌ಸಿಎಯಲ್ಲೂ ಅವರ ಜೊತೆ ಸಮಯ ಕಳೆದಿದ್ದೇನೆ. ನಮಗೆ ಸಹಾಯ ನೀಡಲು ಅವರು ಯಾವಾಗಲೂ ಸಿದ್ಧರಿರುತ್ತಾರೆ,” ಎಂದು ಗೌತಮ್ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...