ಧಾರವಾಡಕ್ಕೆ ಹಿಡಕಲ್ ನೀರಿಗಾಗಿ ಮತ್ತೆ ಕಾಮಗಾರಿ ಆರಂಭ!
ಬೆಳಗಾವಿ:-ಧಾರವಾಡಕ್ಕೆ ಹಿಡಕಲ್ ನೀರಿಗಾಗಿ ಮತ್ತೆ ಕಾಮಗಾರಿ ಆರಂಭವಾಗಿದೆ. ಜಿಲ್ಲೆಯ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರನ್ನು ಪೂರೈಸಲು ಕೈಗೊಂಡ ಯೋಜನೆಯ ಕಾಮಗಾರಿ ಮತ್ತೇ ಆರಂಭಗೊಂಡಿದ್ದು, ನಮ್ಮ ನೀರು ನಮ್ಮ ಹಕ್ಕು ಹೋರಾಟಗಾರ ಮತ್ತು ಮಾಜಿ ಉಸ್ತುವಾರಿ ಸಚಿವ ಶಶಿಕಾಂತ್ ನಾಯಿಕ ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರನ್ನು ಪೂರೈಸಲು ಕೈಗೊಂಡ ಯೋಜನೆಗೆ ಕಳೆದ 15 ದಿನಗಳ ಹಿಂದೆ ಜಲಾಶಯದ ಕೆಳಭಾಗದ ಪ್ರದೇಶದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ರೈತರ ಗಮನಕ್ಕೆ ಬರುತ್ತಲೇ, ರೈತರು ಮತ್ತು ಹೋರಾಟಗಾರರು ಅದನ್ನು ಸ್ಥಗಿತಗೊಳಿಸಿ ಧರಣಿ ನಡೆಸಲಾಗಿತ್ತು. ಈ ವೇಳೆ ನೀರಾವರಿ ಇಲಾಖೆಯು ಮುಖಂಡರೊಂದಿಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೇ, ಮತ್ತೇ ನಿನ್ನೆ ಕಾಮಗಾರಿ ಆರಂಭಗೊಂಡಿರುವುದು ಬೆಳಕಿಗೆ ಬಂದಿದೆ. ರೈತರು ಮತ್ತೇ ಇದರ ವಿರುದ್ದ ನಮ್ಮ ನೀರು ನಮ್ಮ ಹಕ್ಕು ಹೋರಾಟವನ್ನು ಆರಂಭಿಸಲಿದ್ದಾರೆ ಎಂದರು.